ಕಿನ್ಯ ಯವ ಕಾಂಗ್ರೆಸ್ ಸಮಿತಿ ವತಿಯಿಂದ ಚಾಚಾ ನೆಹರೂ ಕ್ರೀಡೊತ್ಸವ

Update: 2022-11-15 04:51 GMT

ಕಿನ್ಯ: ಇಲ್ಲಿನ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪಂಡಿತ್ ಜವಾಹರ್ ಲಾಲ್ ನೆಹರೂ ರವರ 133ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕಿನ್ಯ ಗ್ರಾಮದ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಾಚಾ ನೆಹರು ಕ್ರೀಡಾಕೂಟ ನಡೆಸಲಾಯಿತು.

ಕಿನ್ಯ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಹಮ್ಮದ್ ರಹಮತ್ ನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಕಳ್ಳರಕೋಡಿ, ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಕಿನ್ಯ, ಫಾರೂಕ್ ಕಿನ್ಯ, ಫಯಾಜ್ ಕಿನ್ಯ, ಅಲ್ಪಸಂಖ್ಯಾತ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಮೊಯಿದಿನ್ ಕುಂಞಿ, ಕಿನ್ಯ 4ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮುಸ್ತಫಾ ಕಿನ್ಯ, 2ನೇ ವಾರ್ಡ್ ಅಧ್ಯಕ್ಷ ಉಮರಬ್ಬ, 3ನೇ ವಾರ್ಡ್ ಅಧ್ಯಕ್ಷ ಹಮೀದ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಜಾಝ್ ಕಲ್ಲಾಂಡ ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಕುರಿಯ ಕಾರ್ಯಕ್ರಮದ ವಿವರಗಳನ್ನು ನೀಡಿದರು.  ನಂತರ ಸುಮಾರು 100ಕ್ಕೂ ಹೆಚ್ಚು ಮಕ್ಕಳು  ಕ್ರೀಡಾಕೂಟಕ್ಕೆ ಭಾಗವಹಿಸಿ ಚಾಚಾ ನೆಹರು ಪ್ರಶಸ್ತಿ ವಿಜೇತರಾದರು.

ಮಕ್ಕಳ ಪಂದ್ಯಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎನ್. ಎಸ್ ಕರೀಂ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಬಾವು ಹಾಗೂ ಅಬ್ದುಲ್ ಖಾದರ್ ಕಲ್ಕಟ್ಟ, ಕಾಂಗ್ರೆಸ್  ಮುಖಂಡರಾದ ಬಾವುಚ್ಚ ಜೆ.ಕೆ. ಮೋನು ಕಲ್ಕಟ್ಟ, ಬೆಳರಿಂಗೆ ವಾರ್ಡ್ ಕಾಂಗ್ರೆಸ್ ಮುಖಂಡರಾದ ಅಬುಬಕರ್, ಉಳ್ಳಾಲ ಬ್ಲಾಕ್ ಯವ ಕಾಂಗ್ರೆಸ್ ಕಾರ್ಯದರ್ಶಿ ಅನ್ಸಾರ್ ಕಿನ್ಯ, ಯುವ ಕಾಂಗ್ರೆಸ್ ಕಿನ್ಯ ಸಮಿತಿ ಕಾರ್ಯದರ್ಶಿ ನೌಫಲ್ ಎ. ಪಿ ನಗರ, ಮುಶಾಹಿದ್ ಬೆಳರಿಂಗೆ, ಖಜಾಂಜಿ ಜಾಫರ್ ಮೀನಾದಿ, ಕಬಡ್ಡಿ ತರಬೇತುದಾರಾದ ಇಸ್ಮಾಯಿಲ್ ಕುರಿಯ, 1 ನೇ ವಾರ್ಡ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ನೌಷಾದ್ ಮೀನಾದಿ, 2ನೇ ವಾರ್ಡ್ ಉಪಾಧ್ಯಕ್ಷರಾದ ನೌಫಲ್ ಕಲ್ಲಂಡ, ಕಾರ್ಯದರ್ಶಿ ಝಮೀಮ್, ಯುವ ಇಂಟಕ್ ಅಧ್ಯಕ್ಷರಾದ ಇಸಾಕ್, ಹಾಗೂ ಯುವ ಕಾಂಗ್ರೆಸ್ ಸದಸ್ಯರಾದ ಮುಬಸ್ಸಿರ್, ನೌಮನ್,ನೌಮಾನ್ ಜೆ.ಕೆ, ಮುಹಶೀನ್, ತಾಜುದ್ದೀನ್,ಶಾಹಿದ್, ಅಜ್ಜು, ಮರ್ಝುಕ್ ಮತ್ತಿತರರು ಮಕ್ಕಳ ಕ್ರೀಡಾಕೂಟ ನಡೆಸಿದರು.

Similar News