×
Ad

ಮಕ್ಕಳ ಹಬ್ಬದ ಸಡಗರ-ಲಾಲಿತ್ಯ ವಿಶಿಷ್ಟ ಕಾರ್ಯಕ್ರಮ

Update: 2022-11-15 17:25 IST

ಕುಂದಾಪುರ: ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳನ್ನೇ ಉದ್ಘಾಟಕ ರಾಗಿ, ಸಭಾಧ್ಯಕ್ಷರಾಗಿ, ಮುಖ್ಯ ಅತಿಥಿಗಳಾಗಿ ಶಾಲಾ ವಾರ್ಷಿಕೋತ್ಸವ ನಡೆಸುವ ಕಾರ್ಯಕ್ರಮ ವಿನೂತನ. ಎಲ್ಲಾ ಶಾಲೆಗಳಿಗೂ ಮಾದರಿ ಎಂದು ಝೀ ಟಿವಿ ಡ್ರಾಮಾ ಜೂನಿಯರ್ಸ್‌ ವಿಜೇತೆ ಸಮೃದ್ಧಿ ಕುಂದಾಪುರ ಹೇಳಿದ್ದಾರೆ.

ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಲಾದ ಮಕ್ಕಳ ಹಬ್ಬದ ಸಡಗರ - ಲಾಲಿತ್ಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಾಲಾ ವಿದ್ಯಾರ್ಥಿ ನಾಯಕ ಅನ್ವಿತ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡ್ರಾಮಾ ಜೂನಿಯರ್ಸ್‌ ರನ್ನರ್ ಅಪ್ ಸಾನಿಧ್ಯ ಪೆರ್ಡೂರು, ಶಾಲಾ ವಿಪಕ್ಷ ನಾಯಕಿ ತನುಶ್ರೀ, ಸಾಂಸ್ಕ್ರತಿಕ ಸಚಿವೆ ಜಿ.ನಿಕಿತ, ಶಾಲಾ ಉಪನಾಯಕರಾದ ಹನಿ ಆರ್, ಪ್ರಗತಿ ಉಪಸ್ಥಿತರಿದ್ದರು.

ಬೆಳಿಗ್ಗಿನ ಅವಧಿಯಲ್ಲಿ ಶಾಲೆಯ ಎಲ್ಲಾ ಪೋಷಕರನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು. ಆ ನಂತರ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಅವರಿಂದ ಪೋಷಕರಿಗಾಗಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಸಂಜೆಯ ಕಾರ್ಯಕ್ರಮದಲ್ಲಿ 20 ವರ್ಷಗಳಿಂದ ಶಾಲಾ ಮುಖ್ಯ ಅಡುಗೆ ಯವರಾಗಿ ಸೇವೆ ಸಲ್ಲಿಸಿದ ಬಾಬಿ ಕುಲಾಲ ಇವರನ್ನು ಸನ್ಮಾನಿಸಲಾಯಿತು. ಹೋಬಳಿ ಮಟ್ಟದ ಕ್ರೀಡೆ ಮತ್ತು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಯೋಗಾಸನಾ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸ ಲಾಯಿತು. ಆ ನಂತರ ದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಭರತ ನಾಟ್ಯ ಸಿಂಚನ, ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜು, ರಾಜ್ಯ ಪ್ರಶಸ್ತಿ ಪುರಸ್ಕ್ರತ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ದಾನಿಗಳಾದ ಕೊರಗಯ್ಯ ಶೆಟ್ಟಿ, ಜಿ.ಪ್ರಸಾದ ಕಾಂಚನ್ ಶಿರಿಯಾರ, ಕೊರ್ಗಿ ಗ್ರಾಪಂ ಅಧ್ಯಕ್ಷ ಗೌರೀಶ್ ಹೆಗ್ಡೆ, ಸದಸ್ಯರಾದ ರಾಘವೇಂದ್ರ ಶೆಟ್ಟಿ, ಅಶೋಕ ಮೊಗವೀರ, ಪಲ್ಲವಿ ಕುಲಾಲ, ಶಿಕ್ಷಣ ಸಂಯೋಜಕ ಶೇಖರ್ ಯು, ಸಿಆರ್‌ಪಿ ವಸಂತ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ, ಉಪಾಧ್ಯಕ್ಷ ಗಾಯತ್ರಿ ಆಚಾರ್, ಶಾಲಾ ಮುಖ್ಯ ಶಿಕ್ಷಕ ಶೇಖರ್ ಕುಮಾರ್, ಸಹ ಶಿಕ್ಷಕರಾದ ಸಂಜೀವ ಮೊಗವೀರ, ಜಯಲಕ್ಷ್ಮಿ ಬಿ, ಜಯರಾಮ ಶೆಟ್ಟಿ, ವಿಜಯಾ ಆರ್, ವಿಜಯ ಶೆಟ್ಟಿ, ರವೀಂದ್ರ ನಾಯಕ್, ಗೌರವ ಶಿಕ್ಷಕಿ ಮಧುರಾ, ಅಂಗನವಾಡಿ ಶಿಕ್ಷಕಿ ಶರ್ಮಿಳಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಆಶ್ರಿತಾ ಸ್ವಾಗತಿಸಿದರು. ವಿದ್ಯಾರ್ಥಿ ಸುಜನ್ ವಂದಿಸಿ ದರು. ಶಾಲಾ ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

Similar News