ಉಡುಪಿ: ‘ನಿನ್ನ ಏಳಿಗೆಗೆ ನೀನೇ ಶಿಲ್ಪಿ’ ಉಪನ್ಯಾಸ
ಉಡುಪಿ: ಮಣಿಪಾಲ ರೋಟರಿ, ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ರೇಂಜರ್ಸ್ ಮತ್ತು ರೋವರ್ಸ್ ಘಟಕ ಇವರ ಸಂಯುಕ್ತ ಸಹಭಾಗಿತ್ವದಲ್ಲಿ ‘ನಿನ್ನ ಏಳಿಗೆಗೆ ನೀನೇ ಶಿಲ್ಪಿ’ ಉಪನ್ಯಾಸ ಕಾರ್ಯಕ್ರಮ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು.
ಕನ್ನಡದ ಜನಪ್ರಿಯ ಸಾಹಿತಿ, ವಿಜ್ಞಾನಿ ನೇಮಿಚಂದ್ರ, ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷೆ ರೇಣು ಜಯರಾಂ, ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಒಪುಲ ಸಾಫ್ಟವೇರ್ ಸಂಸ್ಥಾಪಕ ಸುಭಾಶ್ ಸಾಲಿಯಾನ್, ಸಮಾಜ ಸೇವಕ ರವಿ ಕಟಪಾಡಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ವಿವಿಧ ಆಯಾಮಗಳನ್ನು ತೆರೆದಿಟ್ಟರು.
ಕಾರ್ಯಕ್ರಮದಲ್ಲಿ ಹೊಸಪೇಟೆಯ ವಿಕ್ಟರಿ ಜಿಮ್‌ನ ವಲಿಭಾಷಾ ಅವರಿಗೆ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆ ಆಯೋಜನೆಗೆ 22 ಸಾವಿರ ರೂ.ವನ್ನು ರೋಟರಿ ಮಣಿಪಾಲ ವತಿಯಿಂದ ಸಹಾಯಧನದ ರೂಪದಲ್ಲಿ ನೀಡಲಾಯಿತು.
ರೋಟರಿಯ ಯುತ್ ಸರ್ವಿಸಸ್ ನಿರ್ದೇಶಕ ಶ್ರೀಶ ಹೆಗ್ಡೆ, ರೋಟರಿ ಖಜಾಂಚಿ ಕರುಣಾಕರ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಚಿತ್ ಕೊಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.