ಸುರತ್ಕಲ್ ಟೋಲ್ ಸಂಗ್ರಹ ರದ್ದು; ಸ್ವಾಗತ
ಉಡುಪಿ, ನ.15: ಸುರತ್ಕಲ್ ಟೋಲ್ ಸಂಗ್ರಹ ರದ್ಧತಿಯನ್ನು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಸ್ವಾಗತಿಸಿದ್ದಾರೆ. ಇದು ಜನಸಾಮಾನ್ಯರ ಹೋರಾಟಕ್ಕೆ ಸಂದ ಫಲ ಎಂದವರು ಪ್ರತಿಕ್ರಿಯಿಸಿದ್ದಾರೆ.
ಅದೇ ರೀತಿ ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ಕೆಎ20 ಕಾರು ಮತ್ತಿತರ ವಾಹನಗಳಿಗೆ ವಿನಾಯತಿ ನೀಡಬೇಕು ಎಂದೂ ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಲಾ ಕಡೆ ಸರ್ವಿಸ್ ರಸ್ತೆ ಗಳನ್ನು ನಿರ್ಮಾಣ ಮಾಡಿ ಅಪಘಾತಗಳು ಆಗದ ರೀತಿಯಲ್ಲಿ ಕಾಮಗಾರಿ ನಿರ್ವಹಿಸಬೇಕು. ಬಸ್ ಬೇ ಮತ್ತು ಲಾರಿ ಬೇ ನಿರ್ಮಾಣವಾಗ ಬೇಕು, ಬೀದಿ ದೀಪಗಳು ಕೆಟ್ಟು ಹೋಗಿದ್ದು ಕೆಲವು ಜಂಕ್ಷನ್‌ಗಳಲ್ಲಿ ಕತ್ತಲು ಆವರಿಸಿದ್ದು, ಬೀದಿ ದೀಪಗಳ ಅಸಮ ರ್ಪಕ ನಿರ್ವಹಣೆ ಮತ್ತು ಕೆಲವು ಅಂಡರ್ ಪಾಸ್‌ಗಳಲ್ಲಿ ದೀಪಗಳಿಲ್ಲದೇ ಅಪಘಾತಗಳನ್ನು ಸಂಭವಿಸುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಟೋಲ್ ವಿಲೀನದ ಪರಿಣಾಮ ಹೆಜಮಾಡಿಯಲ್ಲಿ ದುಬಾರಿ ಸುಂಕ ನೀಡುವ ಪರಿಸ್ಥಿತಿ ಬರಬಾರದು. ಇದಕ್ಕೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಯೋಗೀಶ್ ವಿ ಶೆಟ್ಟಿ ಒತ್ತಾಯಿಸಿದ್ದಾರೆ.