ಬೈಂದೂರು: ಮಾದಕ ವಸ್ತು ಮಾರಾಟ ಯತ್ನ; ಮೂವರ ಬಂಧನ, ಇಬ್ಬರು ಪರಾರಿ

Update: 2022-11-15 15:06 GMT

ಬೈಂದೂರು, ನ.15: ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಬೈಂದೂರು ಪೊಲೀಸರು ಒತ್ತಿನೆಣೆ ಬಳಿ ನ.14ರಂದು ಬೆಳಗ್ಗೆ ಬಂಧಿಸಿದ್ದಾರೆ.

ಭಟ್ಕಳ ಬಿಲಾಲ್‌ ಖಂಡಾದ ಸಲೀಂ ಸಾಬ್ (28), ಸಮೀರ್ ಸಾಬ್(22), ಮೂಡುಗೋಪಾಡಿಯ ಫೈಝಲ್ (22) ಬಂಧಿತ ಆರೋಪಿಗಳು. ಪೊಲೀಸ್ ದಾಳಿ ವೇಳೆ ಅಲ್ಫಾಝ್ ಹಾಗೂ  ಸುಹೈಲ್ ಎಂಬವರು ಓಡಿ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ.‌

ಬಂಧಿತರಿಂದ 70,000 ರೂ. ಮೌಲ್ಯದ 35.78 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ನಾಲ್ಕು ಮೊಬೈಲ್, ಕಾರು ಮತ್ತು ಕಾರಿನ ಡಿಕ್ಕಿಯಲ್ಲಿದ್ದ ತಲ್ವಾರ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 3,71,000ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News