ಗೂಗಲ್ ಗೆ 3,200 ಕೋ. ರೂ. ದಂಡ

Update: 2022-11-15 17:07 GMT

 ನ್ಯೂಯಾರ್ಕ್, ನ.15: ಬಳಕೆದಾರರ ಸಮ್ಮತಿಯಿಲ್ಲದೆ ಅವರು ಇರುವ, ಭೇಟಿ ನೀಡಿದ ಸ್ಥಳದ ಜಾಡುಹಿಡಿಯುವ(ಟ್ರ್ಯಾಕ್ ಮಾಡಿದ) ಮೂಲಕ ಖಾಸಗಿತವನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಗೂಗಲ್(Google) ಗೆ 3,200 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಎಎಫ್ಪಿ ವರದಿ ಮಾಡಿದೆ.


   ಸಾಧನದಲ್ಲಿರುವ ಲೊಕೇಷನ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಆಫ್ ಮಾಡಲಾಗಿದೆ ಎಂದು ಗೂಗಲ್ ಬಳಕೆದಾರರ ದಾರಿ ತಪ್ಪಿಸಿದ್ದು 2014ರಿಂದಲೂ ಬಳಕೆದಾರರ ಸಮ್ಮತಿಯಿಲ್ಲದೆ ಅವರ ಖಾಸಗಿತವನ್ನು ಉಲ್ಲಂಘಿಸಿದೆ ಎಂದು ಅಮೆರಿಕದ ಒರೆಗಾನ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು. ಪ್ರಕರಣವನ್ನು ಸಂಧಾನ ಮಾತುಕತೆಯಲ್ಲಿ ಇತ್ಯರ್ಥಗೊಳಿಸಲು ಒಪ್ಪಿರುವ ಗೂಗಲ್, 2,300 ಕೋಟಿ ರೂ. ದಂಡ ಪಾವತಿಸಲು ಸಮ್ಮತಿಸಿದೆ. ಅಲ್ಲದೆ 2023ರಿಂದ ಲೊಕೇಷನ್ ಟ್ರಾಕಿಂಗ್ ಕುರಿತ ಬದ್ಧತೆಯನ್ನು ಸ್ಪಷ್ಟಪಡಿಸುವಂತೆ ಗೂಗಲ್ಗೆ ಸೂಚಿಸಲಾಗಿದೆ ಎಂದು ಒರೆಗಾನ್ನ ಅಟಾರ್ನಿ ಜನರಲ್ ಎಲೆನ್ ರೊಸೆನ್ಬ್ಲಮ್(Ellen Rosenblum) ಹೇಳಿದ್ದಾರೆ.


ಅನುಮತಿಯಿಲ್ಲದೆ ಲೊಕೇಷನ್ ಟ್ರ್ಯಾಕ್ ಮಾಡುವುದಕ್ಕೆ ಸಂಬಂಧಿಸಿ ಗೂಗಲ್ ವಿರುದ್ಧ ಅರಿಝೋನಾ, ಇಂಡಿಯಾನಾ, ವಾಷಿಂಗ್ಟನ್ ಮತ್ತು ಕೊಲಂಬಿಯಾ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ.

Similar News