ಭಟ್ಕಳ: ರಸ್ತೆಯ ಗುಂಡಿ ಮುಚ್ಚಿದ ಅಂಜುಮನ್ ಕಾಲೇಜು ವಿದ್ಯಾರ್ಥಿಗಳು

Update: 2022-11-15 18:29 GMT

ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಅಂಜುಮಾನಾಬಾದ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 66 ರ ಅಂಜುಮನ್ ಕಾಲೇಜು ಅಡ್ಡ ರಸ್ತೆಯ ಮೂರು ಸ್ಥಳಗಳನ್ನು ಗುರುತಿಸಿ ಅಲ್ಲಿನ ಗುಂಡಿಗಳನ್ನು ಮುಚ್ಚಿದರು.

ಪ್ರೊ.ವಿದ್ಯಾಧರ್ ಎನ್, ಮನೋಹರ್ ಬಿ ಮತ್ತು ಪ್ರತಿಭಾಜಿ ಮತ್ತು ಬೋಧಕರಾದ ಸದಾನಂದ್ ಎಂ.ಜಿ., ಪಾಂಡು ನಾಯ್ಕ್, ಮೋಹನ್ ನಾಯ್ಕ್ ಮತ್ತು ಮಂಜು ನಾಥ್ ಡಿ.ಬಿ ಅವರ ಮೇಲ್ವಿಚಾರಣೆಯಲ್ಲಿ ದ್ವಿತೀಯ ವರ್ಷದಿಂದ ಅಂತಿಮ ವರ್ಷದವರೆಗೆ ಓದುತ್ತಿರುವ 40 ವಿದ್ಯಾರ್ಥಿಗಳ ಗುಂಪು 4 ತಂಡಗಳ ರೂಪದಲ್ಲಿ ಈ ಚಟುವಟಿಕೆಯಲ್ಲಿ ಭಾಗವಹಿಸಿತು. ಈ ಸಂಪೂರ್ಣ ಕಾರ್ಯಾಚರಣೆಯನ್ನು ಪ್ರೊ.ಚಿದಾನಂದ ನಾಯ್ಕ್ ಎಚ್‌ಒಡಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಪ್ರೊ.ಚಿದಾನಂದ ನಾಯ್ಕ ಮಾತನಾಡಿ, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ರಸ್ತೆ ಗುಂಡಿಗಳಿಂದ ಆಗುವ ಅಪಘಾತಗಳ ಬಗ್ಗೆ ಅರಿವು ಮೂಡಿಸುವುದು ಈ ಚಟುವಟಿಕೆಯ ಉದ್ದೇಶವಾಗಿದೆ ಎಂದರು. ಪ್ರಾಂಶುಪಾಲ ಡಾ.ಕೆ.ಫಝಲುರ್ ರಹ್ಮಾನ್ ಮತ್ತು ರಿಜಿಸ್ಟ್ರಾರ್ ಪ್ರೊ.ಝಾಹಿದ್ ಖರೂರಿ ಅವರು ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರಮುಖವಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

Similar News