ಸೇವಾದಳದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ನೆಲೆಸಿದೆ: ಜಾಕಿಂ ಡಿಸೋಜ

Update: 2022-11-16 05:33 GMT

ಮುಲ್ಕಿ, ನ.16: ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆಯಾಗಿ ಸೇವಾದಳ ವಿಭಾಗವು ಕೆಲಸ ಮಾಡುತ್ತಿದ್ದು, ಶಿಸ್ತು ಸಮಯ ಪಾಲನೆ, ಬದ್ಧತೆ, ಹಾಗೂ ಪಕ್ಷ ನಿಷ್ಠೆ ಇದು ಸೇವಾದಳದ ಪ್ರತೀಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಜಾಕೀಂ ಡಿಸೋಜ ನುಡಿದರು.

ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸೇವಾದಳದ ಚಿಂತನ -ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಸೇವಾ ದಳದ ರಾಜ್ಯ ತರಬೇತುದಾರರಾದ  ವಿಶ್ವನಾಥ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶೀಘ್ರದಲ್ಲಿ ನಡೆಯುವ ರಾಜ್ಯಮಟ್ಟದ ತರಬೇತು ಕಾರ್ಯಕ್ರಮಕ್ಕೆ ಮುಲ್ಕಿ ಬ್ಲಾಕ್ ನಿಂದ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವಂತೆ ಕರೆ ನೀಡಿದರು.

ಕೆಪಿಸಿಸಿ ಸದಸ್ಯರಾದ ವಸಂತ್ ಬರ್ನಾಡ್ ಮಾತನಾಡಿ, ಪ್ರತಿ ಬೂತನಲ್ಲೂ ಪಕ್ಷ ಸಂಘಟನೆ ಆಗಬೇಕು , ಇದಕ್ಕೆ ಸೇವಾದಳ ಕಾರ್ಯಕರ್ತರು ಕೂಡ ಕೈಜೋಡಿಸಬೇಕು ಎಂದು ನುಡಿದರು.

ಅಧ್ಯಕ್ಷತೆಯನ್ನು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೇವಾದಳದ ನಾಯಕರುಗಳಾದ ಭೀಮಶಂಕರ್ , ಧರ್ಮಾನಂದ ಶೆಟ್ಟಿಗಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಯೋಗೇಶ್ ಕೋಟ್ಯಾನ್ ಮಾಜಿ ಸದಸ್ಯ ಬಶೀರ್ ಕುಳಾಯಿ, ಅದ್ದು ಅಂಗರಗುಡ್ಡೆ, ರಜಾಕ್ ಸೂರಿಂಜೆ, ಮಹಾಬಲ ಪೂಜಾರಿ, ರಕ್ಷಿತ್ ಸುವರ್ಣ, ನವನೀತ್ ಪೈಯೋಟ್ಟು, ಸೈಯದ್ ಸೂರಿಂಜೆ, ಪದ್ಮಿನಿ ಐಕಳ, ಮೊದಲಾದವರು ಭಾಗವಹಿಸಿದ್ದರು.

Similar News