ಬೇಹುಗಾರಿಕೆ ಆರೋಪ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾಲಕನ ಬಂಧನ

Update: 2022-11-18 13:33 GMT

ಹೊಸದಿಲ್ಲಿ: ಬೇಹುಗಾರಿಕೆ (Espionage) ಆರೋಪದ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (Foreign Ministry) ಕೆಲಸ ಮಾಡುತ್ತಿದ್ದ ಚಾಲಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜವಾಹರ್ ಲಾಲ್ ನೆಹರು ಭವನದಿಂದ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು Ndtv.com ವರದಿ ಮಾಡಿದೆ. 

 ಆತ ಪೂನಂ ಶರ್ಮಾ ಅಥವಾ ಪೂಜಾ ಎಂಬ ಹೆಸರಿನಲ್ಲಿ ಮಹಿಳೆಯಂತೆ ನಟಿಸುತ್ತಿದ್ದ ಪಾಕಿಸ್ತಾನಿ ವ್ಯಕ್ತಿಗೆ ಮಾಹಿತಿ ಮತ್ತು ದಾಖಲೆಗಳನ್ನು ವರ್ಗಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ. 
  
 ಆರೋಪಿಯನ್ನು ಬಂಧಿಸಿರುವ ದಿಲ್ಲಿ ಪೊಲೀಸ್  ಮೂಲಗಳು, ಚಾಲಕ ಹನಿಟ್ರ್ಯಾಪ್ ಗೆ ಒಳಗಾಗಿದ್ದಾನೆ ಎಂದು ತಿಳಿಸಿವೆ.

ಇದನ್ನೂ ಓದಿ: ಕಾಲೇಜ್ ಲ್ಯಾಬ್‌ನಲ್ಲಿ ರಾಸಾಯನಿಕ ಸೋರಿಕೆ; ‌25 ವಿದ್ಯಾರ್ಥಿಗಳು ಅಸ್ವಸ್ಥ

Similar News