ಮರ್ಕಝುಲ್ ಹುದಾ ಕುಂಬ್ರ ದಮಾಮ್ ಸಮಿತಿ: ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2022-11-19 03:33 GMT

ದಮಾಮ್: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಸೌದಿ ಅರೇಬಿಯಾದ ದಮಾಮ್ ಘಟಕದ ಮಹಾಸಭೆ ಮತ್ತು ಸಾರ್ವಜನಿಕ ಸಮಾವೇಶವು ಕುಂಬ್ರ ಮರ್ಕಝ್ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ದಮಾಮ್ ರೆಡ್ ಟೇಬಲ್ ಸಭಾಂಗಣದಲ್ಲಿ ನಡೆದು

ಈ ಸಂದರ್ಭ ಮುಂದಿನ ಮೂರು ವರ್ಷಗಳ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಇಕ್ಬಾಲ್ ಅರ್ಕುಳ, ಅಧ್ಯಕ್ಷರಾಗಿ ಶಂಸುದ್ದೀನ್ ಕಡಬ, ಪ್ರಧಾನ ಕಾರ್ಯದರ್ಶಿಯಾಗಿ‌ ಅಶ್ರಫ್ ಅಡ್ಕಾರ್, ಕೋಶಾಧಿಕಾರಿಯಾಗಿ ನಾಸಿರ್ ಇಂದ್ರಾಜೆ, ಉಪಾಧ್ಯಕ್ಷರಾಗಿ ಅಶ್ರಫ್ ಜಾಲ್ಸೂರು ಹಾಗೂ ಜತೆ ಕಾರ್ಯದರ್ಶಿಯಾಗಿ ನೌಶಾದ್ ತಲಪಾಡಿ ಅವರನ್ನು ನೇಮಕ ಮಾಡಲಾಯಿತು.

ಸಲಹಾ ಸಮಿತಿ ಸದಸ್ಯರಾಗಿ ಶಾಹುಲ್ ಹಮೀದ್ ಉಜಿರೆ, ಅಬೂಬಕರ್ ರೈಸ್ಕೋ, ಅಂಜದ್ ಖಾನ್ ಪೋಲ್ಯ, ಅಬ್ದುಲ್ ರಹೀಂ ಅರ್ಕುಳ, ಸಯ್ಯದ್ ಬಾವಾ ಬಜ್ಪೆ, ಎಂ.ಬಿ.ಎಂ. ಮದನಿ ಸುಳ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೌಶಾದ್ ಪೋಲ್ಯ, ಮುಹಮ್ಮದ್ ಮಲೆಬೆಟ್ಟು, ಫಾರೂಕ್ ಕುಪ್ಪೆಟ್ಟಿ, ಅಬ್ದುಲ್ಲಾ ಕಡಬ,‌ ಫೈಝಲ್ ಕೃಷ್ಣಾಪುರ, ಝುಬೈರ್ ಸೂರಿಕುಮೇರ್, ರಶೀದ್ ವಿಟ್ಲ, ಇಬ್ರಾಹಿಂ ಚೋಕ, ಅಶ್ರಫ್ ನಾವುಂದ, ಉಮರ್ ಅಳಕೆಮಜಲು, ಉಬೈದುಲ್ಲಾ ಉಜಿರೆ, ಬಾಷಾ ಗಂಗಾವಳಿ, ಝುಬೈರ್ ಕಡಬ, ಶಂಸುದ್ದೀನ್ ಅರ್ಕುಳ, ಹಮೀದ್ ಪೋಲ್ಯ, ಫಯಾಝ್ ಕಡಬ, ಬದ್ರುದ್ದೀನ್ ಇವರನ್ನು ಆರಿಸಲಾಯಿತು.

ಶಂಸುದ್ದೀನ್ ಕಡಬ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಅಂತಾರಾಷ್ಟ್ರೀಯ ಮಂಡಳಿ ಅಧ್ಯಕ್ಷ ಡಿಪಿ ಯೂಸುಫ್ ಸಖಾಫಿ ಉದ್ಘಾಟಿಸಿದರು. ಕೆಸಿಎಫ್ ಅಂತಾರಾಷ್ಟ್ರೀಯ ನಾಯಕ ಅಬೂಬಕರ್ ರೈಸ್ಕೋ, ಮರ್ಕಝುಲ್ ಹುದಾ ಸೌದಿ‌ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಫಾರೂಕ್ ಕನ್ಯಾನ,‌ ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಲ್ಯ, ಕೋಶಾಧಿಕಾರಿ ಶಾಹುಲ್ ಹಮೀದ್ ಉಜಿರೆ, ಮಾಜಿ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೆಸಿಎಫ್ ದಮಾಮ್ ಝೋನ್ ಅಧ್ಯಕ್ಷ ಫಾರೂಕ್ ಕುಪ್ಪೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.‌

ರಾಷ್ಟ್ರೀಯ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಸ್ವಾಗತಿಸಿ, ಅಶ್ರಫ್ ಅಡ್ಕಾರ್ ವಂದಿಸಿದರು. ಪ್ರಾರಂಭದಲ್ಲಿ ನಡೆದ ಬುರ್ದಾ ಮಜ್ಲಿಸ್‌ಗೆ ಅಮಾನ್ ಕಾಟಿಪಳ್ಳ ಮತ್ತು ತೌಫೀಖ್ ಅಂಬಾಗಿಲು ತಂಡ ನೇತೃತ್ವ ನೀಡಿದರು.

Similar News