×
Ad

ನ.20ರಿಂದ ಚಿತ್ರ ಕಲಾವಿದ ದಾಮೋದರ ಆಚಾರ್ಯರ ‘ವರ್ಣ ವಸಂತ’ ಪ್ರದರ್ಶನ

Update: 2022-11-19 19:12 IST

ಉಡುಪಿ, ನ.19: ಉಡುಪಿಯ ಹಿರಿಯ ಕಲಾವಿದ ದಾಮೋದರ ಎಲ್.ಆಚಾರ್ಯರ ‘ವರ್ಣ ವಸಂತ’ ಶೀರ್ಷಿಕೆ ಯಡಿಯ 9ನೇ ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನ ನ.20ರಿಂದ 22ರವರೆಗೆ ನಗರದ ರಾಮಕೃಷ್ಣ ಹೊಟೇಲ್‌ನ ಶರನ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಕಲಾವಿದ ದಾಮೋದರ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರಕಲಾ ಪ್ರದರ್ಶನವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಉಡುಪಿ ಕರಾವಳಿ ಐಎಂಎ ಮಾಜಿ ಅಧ್ಯಕ್ಷ ಡಾ.ಉಮೇಶ್ ಪ್ರಭು ಉದ್ಘಾಟಿಸುವರು. ಹಿರಿಯ ರಥಶಿಲ್ಪಿ ಕೋಟೇಶ್ವರದ ಕೆ.ರಾಜಗೋಪಾಲ ಆಚಾರ್ಯ, ಸಂಸ್ಕೃತಿ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ಯು.ವಿಶ್ವನಾಥ ಶೆಣೈ ಹಾಗೂ ಪ್ರಾಧ್ಯಾಪಕಿ ಮಮತಾ ಸಮಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

2015ರಲ್ಲಿ ಮನೆಮನೆಗೆ ಚಿತ್ರಕಲೆ ಎಂಬ ನೂತನ ಶೈಲಿಯ ಕಲಾ ಸಂಘಟನೆಯನ್ನು ಹುಟ್ಟುಹಾಕಿ ಚಿತ್ರಕಲೆ ಯನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ನಡೆಸಿದ ದಾಮೋದರ ಆಚಾರ್ಯರು ವಿವಿಧ ಕಲಾಪ್ರಕಾರಗಳಾದ ಭಾವಚಿತ್ರ, ಪ್ರಾದೇಶಿಕ ಕಲೆಗಳ ಚಿತ್ರ, ಮಿನಿಯೇಚರ್ ಚಿತ್ರ, ಪ್ರಕೃತಿ ಚಿತ್ರಗಳು ಹಾಗೂ ಸಮಕಾಲೀನ ಕಲೆಗಳಲ್ಲಿ ರಚಿಸಿರುವ ವರ್ಣ ಚಿತ್ರಗಳ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದೆ.

ಕಲಾ ಪ್ರದರ್ಶನವು ಬೆಳಗ್ಗೆ 10ರಿಂದ ಸಂಜೆ 6:30ರವರೆಗೆ ವೀಕ್ಷಣೆಗೆ ತೆರೆದಿ ರುತ್ತದೆ. ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಅಧ್ಯಾಪಕ ವಾಸುದೇವ ಆಚಾರ್ಯ,  ಚಿತ್ರಕಲಾ ಶಿಕ್ಷಕ ಜಯಂತ್ ಪುರೋಹಿತ್ ಹಾಗೂ ಅನುಶ್ರೀ ಉಪಸ್ಥಿತರಿದ್ದರು.

Similar News