ಡಾಲ್ಫಿನ್ ಮೀನಿನ ಕಳೇಬರ ಪತ್ತೆ

Update: 2022-11-19 14:56 GMT

ಬ್ರಹ್ಮಾವರ : ಕೋಡಿ ಗ್ರಾಮದ ಬೆಂಗ್ರೆ ಎಂಬಲ್ಲಿನ ಕಡಲ ತೀರದಲ್ಲಿ ಡಾಲ್ಫಿನ್ ಜಾತಿಯ ಮೀನಿ ಕಳೇಬರ ನ.18ರಂದು ಪತ್ತೆಯಾಗಿದೆ.

ಉಡುಪಿ ವಲಯದ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಅವರ ಮಾರ್ಗದರ್ಶನದಂತೆ ರೀಫ್ ವಾಚ್ ಎನ್‌ಜಿಓ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಡಾಲ್ಫಿನ್ ಮೀನಿನ ಮರಣೋತ್ತರ ಪರೀಕ್ಷೆ ನಡೆಸಿ ಜಮೀನಿನಲ್ಲಿ ಹೂಳಲಾಯಿತು.

ಈ ಕಾರ್ಯಾಚರಣೆಯಲ್ಲಿ ಉಡುಪಿ ಕೇಂದ್ರ ಸ್ಥಾನದ ಉಪವಲಯ ಅರಣ್ಯಾಧಿಕಾರಿ ಗುರುರಾಜ ಕೆ., ಅರಣ್ಯ ರಕ್ಷಕರಾದ ಕೇಶವ್ ಪೂಜಾರಿ ಎಂ., ವಾಹನ ಚಾಲಕ ಜೋಯ್ ಹಾಗೂ ರಿಫ್‌ವಾಚ್ ಎನ್‌ಜಿಒ ಸಂಸ್ಥೆಯ ಡಾ ತೇಜಸ್ವಿನಿ ಶೆಟ್ಟಿಗಾರ್ ಮತ್ತು ವಿರಿಲ್ಲ್ ಭಾಗವಹಿಸಿದ್ದರು.

Similar News