ಉಡುಪಿಯಲ್ಲಿ ‘ಮಿಷನ್ ಸಾಹಸಿ’ ಸಾಹಸ ಪ್ರದರ್ಶನ

Update: 2022-11-19 14:58 GMT

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಸಶಕ್ತ ಸಮಾಜಕ್ಕಾಗಿ ಸಶಕ್ತ ನಾರಿ ಎಂಬ ಅಡಿ ಬರಹ ದೊಂದಿಗೆ ‘ಮಿಷನ್ ಸಾಹಸಿ’ ಸಾಹಸ ಪ್ರದರ್ಶನ ಮತ್ತು ಸಮಾರೋಪ ಸಮಾರಂಭವು ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಮಹಿಳಾ ಪೋಲಿಸ್ ಠಾಣಾ ಉಪನಿರೀಕ್ಷಕಿ ವೈಲೆಟ್ ಫೆಮಿನಾ ಉದ್ಘಾಟಿಸಿದರು. ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪಕಿ ತನುಲಾ ತರುಣ್ ಫಾಯ್ದೆ ಮಾತನಾಡಿದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಎಬಿವಿಪಿ ಕರ್ನಾಟಕ ಪ್ರಾಂತ ಕಾರ್ಯ ಸಮಿತಿ ಸದಸ್ಯ ಡಾ. ರವಿ ಮಂಡ್ಯ, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧಿಕಾರಿ ವಾಮನ್ ಪಾಲನ್, ಮಾಜಿ ಅಧ್ಯಕ್ಷ ರವಿ ಸಾಲಿಯಾನ್, ಜಿಲ್ಲಾ ಕಾರ್ಯದರ್ಶಿ ರೋಹಿತಾಕ್ಷ ಉದ್ಯಾವರ ಉಪಸ್ಥಿತರಿದ್ದರು.

ಎಬಿವಿಪಿ ಕಲಾಮಂಚ್ ವಿಭಾಗ ಪ್ರಮುಖ್ ಐಶ್ವರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಬಿವಿಪಿ ಕಾರ್ಯಕರ್ತೆ ಕೃತಿ ಸ್ವಾಗತಿಸಿದರು. ವೃದ್ದಿ ವಂದಿಸಿ ದರು. ಶ್ರೀಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಳೆದ ಒಂದು ವಾರದಿಂದ ನಗರದ ಪ್ರಮುಖ ಕಾಲೇಜಿನಲ್ಲಿ ಎಬಿವಿಪಿ ಮತ್ತು ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಜಂಟಿ ಸಹಯೋಗದಲ್ಲಿ ಉಚಿತವಾಗಿ ಕರಾಟೆ ತರಬೇತಿಯನ್ನು ನೀಡಲಾಗಿದ್ದು, ಪ್ರಮುಖ ಕಸರತ್ತುಗಳನ್ನು ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಏಕಕಾಲದಲ್ಲಿ ಪ್ರದರ್ಶಿಸಿ ದರು.

Similar News