ಕತರ್‌ ಫಿಫಾ ವಿಶ್ವಕಪ್‌: ಕುರ್‌ಆನ್‌ ಸೂಕ್ತ ಪಠಿಸುವ ಮೂಲಕ ಉದ್ಘಾಟನೆ

Update: 2022-11-20 18:25 GMT

ದೋಹಾ: 2022 ರ FIFA ವಿಶ್ವಕಪ್‌ಗಾಗಿ ಪಂದ್ಯಾವಳಿಗೆ ಕತಾರ್‌ನ ಅಲ್ ಖೋರ್‌ನಲ್ಲಿರುವ ಅಲ್-ಬೈತ್ ಸ್ಟೇಡಿಯಂನಲ್ಲಿ ಚಾಲನೆ ದೊರೆತಿದ್ದು, ಪವಿತ್ರ ಗ್ರಂಥ ಕುರಾನಿನ ಸೂಕ್ತದೊಂದಿಗೆ ಪಂದ್ಯಾಕೂಟವನ್ನು ಉದ್ಘಾಟಿಸಲಾಗಿದೆ. 

 ಯುಎಇಯ ಉಪಾಧ್ಯಕ್ಷ, ಪ್ರಧಾನಮಂತ್ರಿ ಮತ್ತು ದುಬೈ ಆಡಳಿತಗಾರ ಹಿಸ್ ಹೈನೆಸ್ ಶೇಖ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ , ದುಬೈ ಕ್ರೌನ್ ಪ್ರಿನ್ಸ್ ಮತ್ತು ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 ಸಮಾರಂಭವನ್ನು ನಟ ಮೋರ್ಗಾನ್ ಫ್ರೀಮನ್ ಮತ್ತು ಕತಾರ್ ಯೂಟ್ಯೂಬರ್ ಘನಿಮ್ ಅಲ್-ಮುಫ್ತಾಹ್ ನಿರೂಪಿಸಿದ್ದಾರೆ. 
 
 "ಓ ಮನುಕುಲವೇ, ನಾವು ನಿಮ್ಮನ್ನು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಿದ್ದೇವೆ ಮತ್ತು ನೀವು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ನಿಮ್ಮನ್ನು ಜನಾಂಗಗಳು ಮತ್ತು ಬುಡಕಟ್ಟುಗಳನ್ನಾಗಿ ಮಾಡಿದ್ದೇವೆ" ಎಂಬ ಕುರಾನ್ ಸೂಕ್ತವನ್ನು ಅಲ್-ಮುಫ್ತಾಹ್ ಓದಿದ್ದಾರೆ.

Similar News