ಕೇಜ್ರಿವಾಲ್ ರೋಡ್ ಶೋನಲ್ಲಿ ಮೋದಿ ಪರ ಘೋಷಣೆ: ದಿಲ್ಲಿ ಸಿಎಂ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-11-21 03:44 GMT

ಹೊಸದಿಲ್ಲಿ: ಗುಜರಾತ್ (Gujarat) ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ರವಿವಾರ ನಡೆಸಿದ ರೋಡ್‍ಶೋದಲ್ಲಿ ಮೋದಿ ಪರ ಘೋಷಣೆ ಕೂಗಿದ ಘಟನೆ ವರದಿಯಾಗಿದೆ. ರವಿವಾರ ಸಂಜೆ ಹಲೋಲ್ ಪಂಚಮಹಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಮಾತನಾಡುತ್ತಿದ್ದ ವೇಳೆ ಮೋದಿ ಪರ ಘೋಷಣೆ ಕೇಳಿಬಂತು.

ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಜನ ಅವರು ಬಯಸಿದವರ ಪರ ಘೋಷಣೆ ಕೂಗಬಹುದು. ಆದರೆ ಅವರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಿದ್ಯುತ್ ನೀಡುವವರು ನಾವು ಎಂದು ಹೇಳಿದರು. ಮುಂದೊಂದು ದಿನ ಮೋದಿ ಪರ ಘೋಷಣೆ ಕೂಗಿದವರ ಹೃದಯವನ್ನು ಕೂಡಾ ಆಪ್ ಗೆಲ್ಲಲಿದೆ ಎಂದು ಹೇಳಿದರು.

ರೋಡ್‍ಶೋದಲ್ಲಿ ಮಾತನಾಡಿದ ಅವರು, "ಕೆಲ ಸ್ನೇಹಿತರು ಮೋದಿ ಮೋದಿ ಎಂಬ ಘೋಷಣೆ ಕೂಗುತ್ತಿದ್ದಾರೆ. ಅವರಿಗೆ ಇಷ್ಟವಾಗುವವರ ಪರ ಘೋಷಣೆ ಕೂಗಬಹುದು; ಆದರೆ ನಿಮ್ಮ ಮಕ್ಕಳಿಗೆ ಶಾಲೆ ನಿರ್ಮಿಸುವವರು ಕೇಜ್ರಿವಾಲ್. ನೀವು ಎಷ್ಟು ಬೇಕಾದರೂ ಘೋಷಣೆಗಳನ್ನು ಕೂಗಿ; ನಿಮಗೆ ಉಚಿತ ವಿದ್ಯುತ್ ನೀಡುವವರು ಕೇಜ್ರಿವಾಲ್" ಎಂದು ಸ್ಪಷ್ಟಪಡಿಸಿದರು.

ಯಾರೊಂದಿಗೂ ನಮಗೆ ದ್ವೇಷ ಇಲ್ಲ; ನಿಮಗೆ ಇಷ್ಟವಾಗುವವರ ಪರ ಘೋಷಣೆಗಳನ್ನು ಕೂಗಿ. ಒಂದು ದಿನ ನಾವು ನಿಮ್ಮ ಹೃದಯ ಗೆಲ್ಲುತ್ತೇವೆ ಮತ್ತು ನಮ್ಮ ಪಕ್ಷಕ್ಕೆ ಕರೆ ತರುತ್ತೇವೆ ಎಂದರು.

ಇದನ್ನೂ ಓದಿ: ಸೋಮಣ್ಣ, ಕೋಟ, ಪರಮೇಶ್ವರ್, ಯತ್ನಾಳ್  ಸಹಿತ  65 ಸದಸ್ಯರು ಯಾವುದೇ ದಾಖಲೆ ನೀಡಿಲ್ಲ!

Similar News