ಆರ್‌ಪಿಐಯಿಂದ ೨೦ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ: ಮೋಹನ್‌ರಾಜು

Update: 2022-11-21 13:04 GMT

ಉಡುಪಿ: ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಉಡುಪಿ ಜಿಲ್ಲೆಯ ಐದು ಸೇರಿದಂತೆ ರಾಜ್ಯದ ಒಟ್ಟು ೨೦ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮೋಹನ್‌ರಾಜು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಾವರ ತಾಲೂಕಿನ ಧರ್ಮವರ ಆಡಿಟೋರಿಯಂನಲ್ಲಿ ನ.೧೯ ಮತ್ತು ೨೦ರಂದು ನಡೆದ ಪಕ್ಷದ ರಾಜ್ಯ ಸಮಿತಿ ಸಭೆಯಲ್ಲಿ ಮೊದಲನೇಯ ಉಮೇದು ದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.

ಉಡುಪಿ, ಕಾಪು, ಬೈಂದೂರು, ಕುಂದಾಪುರ, ಕಾರ್ಕಳ, ಮುಳಬಾಗಿಲು, ಕೆಜಿಎಫ್, ಪುಲಿಕೇಶಿ ನಗರ, ಸಿ.ವಿ.ರಾಮನ್‌ನಗರ, ವರುಣ, ಟೀ ನರಸೀಪುರ, ಕೊಡಗು, ಮಂಡ್ಯ, ವಿಜಯ ನಗರ, ಹಗರಿಬೊಮ್ಮನಹಳ್ಳಿ, ರಾಯಚೂರು ಲಿಂಗಸೂರು, ಔರದ್, ಕನಕಗಿರಿ, ಸುಳ್ಯ, ಹಿರಿಯೂರು ಚಳ್ಳಕೆರೆ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದರು.
ಅದೇ ರೀತಿಯಲ್ಲಿ ಎಸ್‌ಸಿಎಸ್‌ಟಿ ಹಾಗೂ ಶೋಷಿತ ಸಮು ದಾಯಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಡಿ.೬ರಂದು ಮೈಸೂರಿನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೬ನೇ ಪರಿನಿಬ್ಬಾಣ ದಿನದಂದು ಶೋಷಿತರ ಪರ್ಯಾಯ ರಾಜಕಾರಣ ಎಂಬ ವಿಚಾರದ ಮೇಲೆ ರಾಜ್ಯಮಟ್ಟದ ಜಾಗೃತಿ ಸಮಾವೇಶನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಬೆಲೆ ಏರಿಕೆ, ಮಹಿಳಾ ದೌರ್ಜನ್ಯ, ಸರಕಾರಿ ಇಲಾಖೆಗಳ ಖಾಸಗೀಕರಣ, ಅಸಮಾನತೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸೋತಿವೆ. ಈ ಪಕ್ಷಗಳಿಂದ ಸಂವಿಧಾನದ ಆಶಯ ಎತ್ತಿ ಹಿಡಿಯಲು ಸಾಧ್ಯವಿಲ್ಲ. ಆದುದರಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊರತು ಪಡಿಸಿ ಉಳಿದ ಜನಪರ ಹೋರಾಟದ ಪಕ್ಷಗಳ ಜೊತೆ ಪರ್ಯಾಯ ರಾಜಕೀಯ ಶಕ್ತಿ ಆಗಲು ಕೈಜೋಡಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ರಾಜು ಎಂ.ತಳವಾರ್, ಶೇಖರ್ ಹಾವಂಜೆ, ಉಡುಪಿ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ, ಪ್ರಧಾನ ಕಾರ್ಯ ದರ್ಶಿ ಸಂಜೀವ ನಾಯ್ಕ್, ದಸಂಸ ಭೀಮವಾದ ಜಿಲ್ಲಾ ಸಂಚಾಲಕ ಗೋಪಾಲ್ ಶಿವಪುರ ಉಪಸ್ಥಿತರಿದ್ದರು.

Similar News