ರಾಜಸ್ಥಾನ:ಒಂದೇ ಕುಟುಂಬದ ಆರು ಜನರ ಮೃತ್ಯು

Update: 2022-11-21 16:08 GMT

ಉದಯಪುರ,ನ.21: ರಾಜಸ್ಥಾನದ ಉದಯಪುರ ಜಿಲ್ಲೆಯ ಝಡೋಲಿ(Zadoli) ಗ್ರಾಮದಲ್ಲಿ ದಂಪತಿ ಹಾಗೂ ಅವರ ನಾಲ್ವರು ಮಕ್ಕಳ ಶವಗಳು ಸೋಮವಾರ ಅವರ ನಿವಾಸದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಮುಖ್ಯಸ್ಥ ಪಪ್ಪು ಗಮೇಟಿ(Pappu Gameti) ಮಕ್ಕಳು ಮತ್ತು ಪತ್ನಿಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಪ್ರಾಥಮಿಕ ತನಿಖೆಯು ಸೂಚಿಸಿದೆ ಎಂದು ಪೊಲೀಸರು ತಿಳಿಸಿದರು. ಗಮೇಟಿ ಮತ್ತು ಮೂವರು ಮಕ್ಕಳ ಶವಗಳು ನೇಣುಗಳಲ್ಲಿ ತೂಗಾಡುತ್ತಿದ್ದರೆ,ಪತ್ನಿ ಮತ್ತು ಇನ್ನೊಂದು ಮಗುವಿನ ಶವಗಳು ಹಾಸಿಗೆಯಲ್ಲಿದ್ದವು.

ವಿಧಿ ವಿಜ್ಞಾನ ತಜ್ಞರ ತಂಡ ಮತ್ತು ಶ್ವಾನದಳ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು,ಪೊಲೀಸರು ಸಾಕ್ಷಾಧಾರಗಳನ್ನು ಕಲೆ ಹಾಕುತ್ತಿದ್ದಾರೆ.

Similar News