ಶಾಸಕರಿಗೆ ಆಮಿಷ ಪ್ರಕರಣ: ಎಸ್‌ಐಟಿ ಮುಂದೆ ಹಾಜರಾಗುವಂತೆ ಬಿ.ಎಲ್‌. ಸಂತೋಷ್‌ ಗೆ ಹೈಕೋರ್ಟ್‌ ಆದೇಶ

Update: 2022-11-22 06:22 GMT

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕರಿಗೆ ಆಮಿಷವೊಡ್ಡಿದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಏಳು ಸದಸ್ಯರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಸೂಚಿಸಿದೆ ಎಂದು barandbench ವರದಿ ಮಾಡಿದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41 ಎ (ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗುವ ಸೂಚನೆ) ಅಡಿಯಲ್ಲಿ ಎಸ್‌ಐಟಿ ಹೊರಡಿಸಿದ ನವೆಂಬರ್ 16 ರ ನೋಟಿಸ್‌ಗೆ ತಡೆ ಕೋರಿ ಬಿಜೆಪಿ ರಾಜ್ಯ ಘಟಕವು ಮನವಿ ಸಲ್ಲಿಸಿದೆ.

ಏಕಸದಸ್ಯ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಅವರು ವಿಧಿಸಿದ ಷರತ್ತುಗಳನ್ನು ಅನುಸರಿಸಿ ತೆಲಂಗಾಣ ಪೊಲೀಸ್ ಎಸ್‌ಐಟಿ ಎದುರು ಹಾಜರಾಗುವಂತೆ ಸಂತೋಷ್‌ಗೆ ಸೂಚಿಸಿದರು ಆದರೆ ಅವರನ್ನು ಬಂಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

"ಎಸ್‌ಐಟಿಯು ಸೆಕ್ಷನ್ 41-ಎ ಸಿಆರ್‌ಪಿಸಿ ಅಡಿಯಲ್ಲಿ ನೋಟಿಸ್ ನೀಡಿರುವುದರಿಂದ, ಮುಂದಿನ ಆದೇಶದವರೆಗೆ ನೋಟಿಸ್ (ಸಂತೋಷ್) ಅವರನ್ನು ಬಂಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನೋಟಿಸ್ ದಿನಾಂಕ 16.11 ರ ಸೆಕ್ಷನ್ 41-ಎ ನೋಟೀಸ್ ಅಡಿಯಲ್ಲಿ ಎಸ್‌ಐಟಿ ವಿಧಿಸಿದ ಷರತ್ತುಗಳನ್ನು ಅನುಸರಿಸಬೇಕು" ಎಂದು ನ್ಯಾಯಾಲಯ ನಿರ್ದೇಶಿಸಿದೆ.

CrPC ಯ ಸೆಕ್ಷನ್ 41A ಅಡಿಯಲ್ಲಿ ನೋಟಿಸ್ ನೀಡಿರುವುದರಿಂದ ಸಂತೋಷ್ ಬಂಧನದ ಯಾವುದೇ ಆತಂಕವನ್ನು ಹೊಂದಬೇಕಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Similar News