ಮಂಗಳೂರು: ಹಿರಾ ಬಾಲಕಿಯರ ಪ್ರೌಢ ಶಾಲೆಯ ಹೆಸರು ಬದಲಾವಣೆ

Update: 2022-11-22 09:37 GMT

ಮಂಗಳೂರು: ಹಿರಾನಗರ-ಪೆರ್ಮನ್ನೂರು ಇಲ್ಲಿನ ಹಿರಾ ಬಾಲಕಿಯರ ಪ್ರೌಢ ಶಾಲೆಯ ಹೆಸರನ್ನು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಆದೇಶದ ಮೇರೆಗೆ "ಹಿರಾ ಶಾಲೆ" ಎಂದು ಬದಲಾಯಿಸಲಾಗಿದೆ. 2022ರನ್ವಯ ಈ ಶಾಲೆಯಲ್ಲಿ ಸಹಶಿಕ್ಷಣ (ಕೋ ಎಜುಕೇಶನ್)ಕ್ಕೆ ಅನುಮತಿಸಿದೆ. ಈ ಮೇಲಿನ ಬದಲಾವಣೆಯನ್ನು ಸಾರ್ವಜನಿಕರು ಗಮನಿಸಿ ಮುಂದಕ್ಕೆ ಎಲ್ಲಾ ಪತ್ರ ವ್ಯವಹಾರವನ್ನು ಬದಲಾದ ಶಾಲೆಯ ಹೆಸರಿನಲ್ಲಿಯೇ ಮಾಡಬೇಕಾಗಿ ಶಾಲಾ ಪ್ರಕಟನೆ ತಿಳಿಸಿದೆ.

Similar News