ಉಡುಪಿ: 108 ಅಂಬ್ಯುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2022-11-22 11:14 GMT

ಕೋಟ: ಹೇರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಸಾಗಿಸುತ್ತಿದ್ದ 108 ಅಂಬುಲೆನ್ಸ್‌ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನ.21ರಂದು ಸಂಜೆ ವೇಳೆ ನಡೆದಿದೆ.

ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೇರಿಗೆ ನೋವಿನಿಂದ ಬಳಲುತ್ತಿದ್ದ ಸಂಧ್ಯಾ (27) ಅವರನ್ನು ತಕ್ಷಣ 108 ಆಂಬುಲೆನ್ಸ್ ಚಾಲಕ ಚಂದ್ರಕಾಂತ್ ಹಾಗೂ ಇಎಂಟಿ ಜಾನೆ ಲಿವಿಸ್ ತಕ್ಷಣ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

ದಾರಿ ಮಧ್ಯೆ ನಿಟ್ಟೂರು ಬಳಿ ಹೆರಿಗೆ ನೋವು ತೀವ್ರಗೊಂಡ ಹಿನ್ನೆಲೆ ಯಲ್ಲಿ ಸಂಧ್ಯಾ, ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅಂಬುಲೆನ್ಸ್‌ನಲ್ಲಿ ಸಿಬ್ಬಂದಿ ಜಾನೆ ಲಿವಿಸ್ ಹಾಗೂ ಚಂದ್ರಕಾಂತ್ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ದಾಖಲಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Similar News