×
Ad

ಥೈಲ್ಯಾಂಡ್: ಕಾರು ಬಾಂಬ್ ಸ್ಫೋಟ; ಪೊಲೀಸ್ ಅಧಿಕಾರಿ ಮೃತ್ಯು, 30 ಮಂದಿಗೆ ಗಾಯ

Update: 2022-11-22 21:23 IST

ಬ್ಯಾಂಕಾಕ್, ನ.22: ದಕ್ಷಿಣ ಥೈಲ್ಯಾಂಡ್ (Thailand)ನಲ್ಲಿ ಮಂಗಳವಾರ ಪೊಲೀಸ್ ಠಾಣೆಯ ಕಂಪೌಂಡ್ ನೊಳಗೆ ಕಾರು ಬಾಂಬ್ ಸ್ಫೋಟಿಸಿದಾಗ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದು ಇತರ 30 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರಿನಲ್ಲಿಟ್ಟಿದ್ದ ಬಾಂಬ್ ಸ್ಫೋಟಿಸಿದ್ದು ಠಾಣೆಯ ಪೊಲೀಸ್ ಅಧಿಕಾರಿ  ಮೃತರಾಗಿದ್ದಾರೆ. ಕನಿಷ್ಟ 30 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟ ನಡೆದ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಗಾಯಗೊಂಡವರಲ್ಲಿ ಪೊಲೀಸ್ ಸಿಬಂದಿಯೂ ಸೇರಿದ್ದಾರೆ. ಇದುವರೆಗೆ ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ನರಥಿವಟ್ ಪ್ರಾಂತದ ಉಪ ಪೊಲೀಸ್ ಆಯುಕ್ತ  ನಿತಿ ಸುಕ್ಸಾನ್(Niti Suksan)ಹೇಳಿದ್ದಾರೆ.

ಮಲೇಶ್ಯಾದ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಥೈಲ್ಯಾಂಡ್ ನ  ಪಟ್ಟಾನಿ, ಯಾಲಾ, ನರಥಿವಾಟ್ ಮುಂತಾದ ಪ್ರಾಂತಗಳಲ್ಲಿ ಕೆಳಮಟ್ಟದ ಬಂಡಾಯ ಚಟುವಟಿಕೆ ಹಲವು ದಶಕಗಳಿಂದ ಮುಂದುವರಿದಿದೆ. 

Similar News