ಎಲಾನ್ ಮಸ್ಕ್ ಗೆ 100 ಶತಕೋಟಿ ಡಾಲರ್ ಸಂಪತ್ತು ನಷ್ಟ

Update: 2022-11-22 17:35 GMT

ನ್ಯೂಯಾರ್ಕ್, ನ.22: ಕಳೆದ 2 ವರ್ಷದಲ್ಲಿ ಟೆಸ್ಲಾ ಸಂಸ್ಥೆಯ ಶೇರುಗಳ ಮೌಲ್ಯ ಕನಿಷ್ಟ ಮಟ್ಟಕ್ಕೆ ಕುಸಿದ ಕಾರಣ ಎಲಾನ್ ಮಸ್ಕ್ ಗೆ 2022ರಲ್ಲಿ 100 ಶತಕೋಟಿ ಡಾಲರ್ ಸಂಪತ್ತು ನಷ್ಟವಾಗಿದೆ ಎಂದು ಮೂಲಗಳು ಹೇಳಿವೆ. 

ನಷ್ಟದ ಹೊರತಾಗಿಯೂ ಮಸ್ಕ್ 169.8 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಈಗಲೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದ್ದಾರೆ ಎಂದು ಬ್ಲೂಮ್ಬರ್ಗ್ ಕೋಟ್ಯಾಧಿಪತಿಗಳ ಸೂಚ್ಯಂಕ ವರದಿ ಮಾಡಿದೆ. 

ಟೆಸ್ಲಾದ ಶೇರುಗಳ ಮೌಲ್ಯ ಸೋಮವಾರ ನ್ಯೂಯಾರ್ಕ್ ಶೇರು ಮಾರುಕಟ್ಟೆಯ ವ್ಯವಹಾರದಲ್ಲಿ 6.8%ದಷ್ಟು ಕುಸಿತ ಕಂಡಿದ್ದು , ಈ ವರ್ಷ ಟೆಸ್ಲಾ ಶೇರುಗಳ ಮೌಲ್ಯದಲ್ಲಿ 52%ದಷ್ಟು ಕುಸಿತ ದಾಖಲಾಗಿದೆ.

Similar News