ಸೇನಾ ಮುಖ್ಯಸ್ಥರ ನೇಮಕದ ಬಳಿಕ ಇಮ್ರಾನ್ ಜತೆ ವ್ಯವಹರಿಸುತ್ತೇವೆ: ಪಾಕಿಸ್ತಾನದ ರಕ್ಷಣಾ ಸಚಿವರ ಎಚ್ಚರಿಕೆ
Update: 2022-11-22 23:15 IST
ಇಸ್ಲಮಾಬಾದ್, ನ.22: ನೂತನ ಸೇನಾ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸರಕಾರ ವಿಪಕ್ಷ ಮುಖಂಡ, ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಜತೆ ವ್ಯವಹರಿಸಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜ ಆಸಿಫ್(Khwaja Asif) ಮಂಗಳವಾರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಎರಡ್ಮೂರು ದಿನದಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಿರೀಕ್ಷೆಯೂ ಅಂತ್ಯವಾಗಲಿದ್ದು ಆ ಬಳಿಕ ಇಮ್ರಾನ್ಖಾನ್ರೊಂದಿಗೆ ವ್ಯವಹರಿಸಲಿದ್ದೇವೆ ಎಂದು ನ್ಯಾಷನಲ್ ಅಸೆಂಬ್ಲಿಯ ಸದನದಲ್ಲಿ ಸಚಿವರು ಹೇಳಿರುವುದಾಗಿ `ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ಸೇನಾ ಮುಖ್ಯಸ್ಥರ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ ರವಾನಿಸುವಂತೆ ಪಾಕ್ ಪ್ರಧಾನಿ ಶಹಬಾಝ್ ಶರೀಫ್(Shahbaz Sharif) ಸೋಮವಾರ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದರು.