ಗುಜರಾತ್:‌ ಬಿಜೆಪಿ ವಿರುದ್ಧ ಮತಚಲಾಯಿಸಲು ಜಾನುವಾರು ಸಾಕಣೆದಾರರ ಮಹಪಂಚಾಯತ್‌ ನಿರ್ಧಾರ

Update: 2022-11-23 17:39 GMT

ಅಹಮದಾಬಾದ್: ವಿಧಾನಸಭಾ ಚುನಾವಣೆಯಲ್ಲಿ ಇಡೀ ಸಮುದಾಯ ಬಿಜೆಪಿ (BJP) ವಿರುದ್ಧ ಮತ ಚಲಾಯಿಸಲಿದೆ ಎಂದು ರಾಜ್ಯದ ಜಾನುವಾರು ಸಾಕಣೆದಾರರ ಛತ್ರಿ ಸಂಸ್ಥೆ ಗುಜರಾತ್ (Gujarat) ಮಾಲ್ಧಾರಿ ಮಹಾಪಂಚಾಯತ್ (Maldhari Mahapanchayat) (ಜಿಎಂಎಂ) ಮಂಗಳವಾರ ಪ್ರಕಟಿಸಿದೆ. ರಾಜ್ಯದಲ್ಲಿ ವಾಸಿಸುತ್ತಿರುವ ಮಾಲ್ಧಾರಿಗಳ (ದನ ಸಾಕುವವರು) ಸಂಖ್ಯೆ ಸುಮಾರು 61 ಲಕ್ಷ ಎಂದು ಜಿಎಂಎಂ ಹೇಳಿದೆ.

ಮಾಲ್ಧಾರಿಗಳು ಇತರೆ ಯಾವುದೇ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಲು ಸಮುದಾಯದ ಸದಸ್ಯರು ಸ್ವತಂತ್ರರು ಎಂದು ಮಂಡಳಿ ಹೇಳಿದೆ. ಜಿಎಂಎಂ ಪ್ರಕಾರ, ರಾಜಕೀಯ ಪಕ್ಷಗಳು ಏಳು ಸ್ಥಾನಗಳಲ್ಲಿ ಮಾಲ್ಧಾರಿಗಳನ್ನು ಕಣಕ್ಕಿಳಿಸಿದೆ.

ಪ್ರಸ್ತುತ ಸರ್ಕಾರದ ನೀತಿಗಳಿಂದಾಗಿ ಕಳೆದ 18 ತಿಂಗಳಿಂದ ಜಾನುವಾರು ಸಾಕಣೆದಾರರು ಆದಾಯ ಮತ್ತು ಜೀವನೋಪಾಯದ ನಷ್ಟವನ್ನು ಅನುಭವಿಸಿದ್ದಾರೆ ಎಂದು ಜಿಎಂಎಂ ವಕ್ತಾರ ನಾಗಜಿ ದೇಸಾಯಿ ಮಂಗಳವಾರ ಹೇಳಿದ್ದಾರೆ. 

"ರಾಜ್ಯದಾದ್ಯಂತ ಪ್ರತಿದಿನ ನಮ್ಮ ನೂರಾರು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ, ಅವು ಅಲ್ಲಿ ಹಸಿವಿನಿಂದ ಸಾಯುತ್ತಿದೆ" ಎಂದು ಅವರು ಹೇಳಿದ್ದಾರೆ.

ಮುಖಂಡರು ಮತ್ತು ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಲು ಮಹಾಪಂಚಾಯತ್ ನಿರ್ಧರಿಸಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ತನ್ನ ಮನೆಗೆ ತಾನೇ ಪೆಟ್ರೋಲ್ ಬಾಂಬ್‌ ಎಸೆದ ಹಿಂದುತ್ವ ಸಂಘಟನೆಯ ನಾಯಕನ ಬಂಧನ

Similar News