ಸ್ಕಾಟ್ಲೆಂಡ್ ಜನಾಭಿಪ್ರಾಯಕ್ಕೆ ಬ್ರಿಟನ್ ಸುಪ್ರೀಂಕೋರ್ಟ್ ನಕಾರ

Update: 2022-11-23 18:09 GMT

ಲಂಡನ್, ನ.23: ಬ್ರಿಟನ್ ಸಂಸತ್ತಿನ ಅನುಮೋದನೆ ಪಡೆಯದೆ  ಸ್ವಾತಂತ್ರ್ಯದ ಕುರಿತು ಮುಂದಿನ ವರ್ಷ ಸ್ಕಾಟ್ಲೆಂಡ್ ಜನಾಭಿಪ್ರಾಯ ಸಂಗ್ರಹ ನಡೆಸುವಂತಿಲ್ಲ ಎಂದು ಬ್ರಿಟನ್ನ ಸುಪ್ರೀಂಕೋರ್ಟ್ (Supreme Court of Britain)ಬುಧವಾರ ಆದೇಶಿಸಿದೆ.

ಇಂಗ್ಲೆಂಡಿನೊಂದಿಗಿನ 300 ವರ್ಷಕ್ಕೂ ಹೆಚ್ಚಿನ ಒಕ್ಕೂಟವನ್ನು ಅಂತ್ಯಗೊಳಿಸುವ ಕುರಿತು 2014ರಲ್ಲಿ ಸ್ಕಾಟ್ಲ್ಯಾಂಡ್ ನಡೆಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ನಿರ್ಣಯದ ಪರ 55% ಜನ ಅಭಿಪ್ರಾಯ ಸೂಚಿಸಿದ್ದರು. ಆದರೆ ಈ ಜನಾಭಿಪ್ರಾಯ ಸಂಗ್ರಹ ಬ್ರಿಟನ್ ಯುರೋಪಿಯನ್ ಯೂನಿಯನ್ ಸದಸ್ಯತ್ವ ತೊರೆಯುವ ಕುರಿತಾಗಿದೆ ಎಂಬ ವಾದವೂ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ 2023ರ ಅಕ್ಟೋಬರ್ 19ರಂದು ಸ್ವಾತಂತ್ರ್ಯದ ಬಗ್ಗೆ ಜನಾಭಿಪ್ರಾಯ ಸಂಗ್ರಹವನ್ನು ಕಾನೂನುಬದ್ಧವಾಗಿ, ಅಂತರಾಷ್ಟ್ರೀಯ ಮಾನ್ಯತೆಯೊಂದಿಗೆ ನಡೆಸುವುದಾಗಿ ಸ್ಕಾಟ್ಲೆಂಡ್ ನ  ಪ್ರಥಮ ಸಚಿವ ನಿಕೋಲ ಸ್ಟರ್ಜನ್ (Nicola Sturgeon)ಘೋಷಿಸಿದ್ದರು.

ಇದನ್ನು ಬ್ರಿಟನ್ ಸರಕಾರ ವಿರೋಧಿಸಿದ್ದರಿಂದ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂಕೋರ್ಟ್ ಬ್ರಿಟನ್ ಸರಕಾರದ ನಿಲುವನ್ನು ಎತ್ತಿಹಿಡಿದಿದೆ.

Similar News