ಕಳೆದ 16 ತಿಂಗಳಲ್ಲಿ ಪ್ರತಿ 3 ದಿನಕ್ಕೊಮ್ಮೆ ಒಬ್ಬ 'ಭ್ರಷ್ಟ ಅಧಿಕಾರಿ'ಯನ್ನು ಹೊರಹಾಕಿದ ರೈಲ್ವೇ ಇಲಾಖೆ: ವರದಿ

Update: 2022-11-24 07:02 GMT

ಹೊಸದಿಲ್ಲಿ: ಕಳೆದ 16 ತಿಂಗಳಲ್ಲಿ ರೈಲ್ವೇ  Railways ಇಲಾಖೆಯು ಪ್ರತಿ ಮೂರು ದಿನಗಳಿಗೊಮ್ಮೆ ಒಬ್ಬ ಕಾರ್ಯನಿರ್ವಹಣೆ ಮಾಡದ ಅಥವಾ ಭ್ರಷ್ಟ ಅಧಿಕಾರಿಯನ್ನು ಹೊರಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 139 ಅಧಿಕಾರಿಗಳು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಿದ್ದರೆ, 38 ಮಂದಿಯನ್ನು ಸೇವೆಯಿಂದ ತೆಗೆದುಹಾಕಲಾಗಿದೆ.

ಇಬ್ಬರು ಹಿರಿಯ ದರ್ಜೆ ಅಧಿಕಾರಿಗಳನ್ನು ಬುಧವಾರ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅವರಲ್ಲಿ ಒಬ್ಬ ಅಧಿಕಾರಿಯು ಹೈದರಾಬಾದ್‌ನಲ್ಲಿ  5 ಲಕ್ಷ ರೂ. ಲಂಚದೊಂದಿಗೆ ಸಿಬಿಐಗೆ ಸಿಕ್ಕಿಬಿದ್ದರೆ, ಇನ್ನೊಬ್ಬರು  3 ಲಕ್ಷ ರೂ. ದೊಂದಿಗೆ ರಾಂಚಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದರು.

"(ರೈಲ್ವೆ) ಸಚಿವರು (ಅಶ್ವಿನಿ ವೈಷ್ಣವ್) ಅವರು 'ಕೆಲಸ ಮಾಡಿ ಇಲ್ಲವೇ ಸೇವೆಯಿಂದ ಕಿತ್ತುಹಾಕುವ' ವಿಚಾರದ ಬಗ್ಗೆ ಬಹಳ ಸ್ಪಷ್ಟವಾಗಿದ್ದಾರೆ. ಪ್ರತಿ ಮೂರು ದಿನಗಳಿಗೊಮ್ಮೆ ನಾವು ಜುಲೈ 2021 ರಿಂದ ರೈಲ್ವೇಯಿಂದ ಒಬ್ಬ ಭ್ರಷ್ಟ ಅಧಿಕಾರಿಯನ್ನು ಹೊರಹಾಕಿದ್ದೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Similar News