ಎನ್‌ಸಿಇಆರ್‌ಟಿ ಪಠ್ಯದಲ್ಲಿ ಹಿಂಸಾತ್ಮಕ ಪೌರುಷಕ್ಕೆ ಸಮರ್ಥನೆ: ದಿಲ್ಲಿ ಮಕ್ಕಳ ಹಕ್ಕುಗಳ ಆಯೋಗ ಆರೋಪ

Update: 2022-11-24 17:00 GMT

ಹೊಸದಿಲ್ಲಿ,: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಪಠ್ಯಪುಸ್ತಕಗಳಲ್ಲೊಂದರಲ್ಲಿರುವ ‘ಹಿಂಸಾತ್ಮಕ ಪೌರುಷ’('Violent Manhood')ವನ್ನು ಸಮರ್ಥಿಸುವ ಅಧ್ಯಾಯವನ್ನು ತೆಗೆದುಹಾಕಬೇಕೆಂದು ದಿಲ್ಲಿ ಮಕ್ಕಳ ಹಕ್ಕು(Delhi Children's Rights)ಗಳ ಆಯೋಗವು ಗುರುವಾರ ಆಗ್ರಹಿಸಿದೆ.

 9ನೇ ತರಗತಿಯ ಎನ್‌ಸಿಆರ್‌ಟಿಇನ ಇಂಗ್ಲೀಷ್ ಪಠ್ಯಪುಸ್ತಕದಲ್ಲಿರುವ ‘ ದಿ ಲಿಟಲ್ ಗರ್ಲ್’('The Little Girl') ಪಾಠದಲ್ಲಿ ಮಹಿಳೆಯರನ್ನು ರೂಢಿಗತ ಮನಸ್ಥಿತಿಯೊಂದಿಗೆ ಚಿತ್ರಿಸಲಾಗಿದೆ ಹಾಗೂ ಗೃಹ ಹಿಂಸೆಯನ್ನು ಒಪ್ಪಿಕೊಳ್ಳುವಂತೆ ಮಕ್ಕಳಿಗೆ ಬೋಧಿಸುತ್ತದೆ ಎಂದು ದಿಲ್ಲಿ ಮುಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಅನುರಾಗ ಕುಂಡು ಎನ್‌ಸಿಇಆರ್‌ಟಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ದಿ ಲಿಟ್ಲ್ ಗರ್ಲ್ ಪಾಠವು ತನ್ನ ತಂದೆಯ ನಿರಂತರವಾಗಿ ಭಯಪಡುವ ಬಾಲಕಿ ಕೆಝಿಯಾ(Keziah)ಳ ಕುರಿತಾದ ಕಥಾವಸ್ತುವನ್ನು ಹೊಂದಿದೆ ಎಂದು ಕುಂಡು ಪತ್ರದಲ್ಲಿ ತಿಳಿಸಿದ್ದಾರೆ.

 ಬಾಲಕಿಯ ತಂದೆಯು ಕೋಪಿಷ್ಠ, ದೈಹಿಕವಾಗಿ ಬಲಿಷ್ಠ, ಹಿಂಸಾಪ್ರವೃತ್ತಿಯವ ಹಾಗೂ ದಂಡಿಸುವ ಸ್ವಭಾವವುಳ್ಳವ ಎಂದು ಪಾಠದಲ್ಲಿ ಉಲ್ಲೇಖಿಸಲಾಗಿದೆ ಎಂದು ಆಕೆ ಹೇಳಿದ್ದಾರೆ.ಈ ಬಗ್ಗೆ ಆಯೋಗವು ಹಲವಾರು ಲಿಂಗ ಸಮಾನತೆ ತಜ್ಞರನ್ನು ಸಮಾಲೋಚಿಸಿದ್ದು, ಅವರು ಈ ಅಧ್ಯಾಯವು ಅತ್ಯಂತ ಸಮಸ್ಯೆಯಿಂದ ಕೂಡಿದ್ದಾಗಿದೆಯೆಂದು ಅಭಿಪ್ರಾಯಿಸಿರುವುದಾಗಿ ಕುಂಡು ತಿಳಿಸಿದ್ದಾರೆ.

ಬಾಲಕಿಯ ಕೆಝಿಯಾಳ ಅಜ್ಜಿ ಹಾಗೂ ತಾಯಿ ಅವರು ಸೌಮ್ಯ, ವಿನಮ್ರ ಸ್ವಭಾವದವರು ಹಾಗೂ ದೌರ್ಜನ್ಯ ಹಾಗೂ ಪುರುಷಪ್ರಾಧಾನ್ಯಕ್ಕೆ ಅವಕಾಶ ಮಾಡಿಕೊಡುವವರಾಗಿದ್ದಾರೆ. ತಂದೆಯ ದೌರ್ಜನ್ಯದ ಹೊರತಾಗಿಯೂ ಆತನ ಸೇವೆ ಮಾಡುವ ಮೂಲಕ ಒಳ್ಳೆಯ ಬಾಲಕಿಯಾಗಿರಬೇಕೆಂದು ಅವರು ಬೋಧಿಸುತ್ತಾರೆ . ತಾಯಿಯು ಮನೆಯಲ್ಲಿ ವಿಶ್ರಾಂತಿ ಪಡೆಯುವುದೇ ಇಲ್ಲ, ಮನೆಗೆಲಸಗಳನ್ನು ಮಾಡುತ್ತಲೇ ಇರುವವಳು ಎಂಬಂತೆ ಪಾಠದಲ್ಲಿ ಬಿಂಬಿಸಲಾಗಿದೆ’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಮಕ್ಕಳನ್ನು ಅತ್ಯಂತ ಪ್ರಗತಿರವಾದ ಚಿಂತನೆಗಳನ್ನು ಪರಿಚಯಿಸಬೇಕಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.

Similar News