ಮಲೇಶ್ಯಾದ ಪ್ರಧಾನಿಯಾಗಿ ಅನ್ವರ್ ಇಬ್ರಾಹಿಂ ನೇಮಕ

Update: 2022-11-24 18:16 GMT

ಕೌಲಾಲಂಪುರ, ನ.24: ಮಲೇಶ್ಯಾದ ನೂತನ ಪ್ರಧಾನಿಯಾಗಿ ಹಿರಿಯ ಮುಖಂಡ ಅನ್ವರ್ ಇಬ್ರಾಹಿಂ (Anwar Ibrahim)ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ಸಂಜೆ ಕೌಲಲಾಂಪುರ(Kuala Lumpur)ದ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ , ದೊರೆ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಶಾ(Sultan Abdullah Sultan Ahmad Shah) ಅವರ ಉಪಸ್ಥಿತಿಯಲ್ಲಿ ಇಬ್ರಾಹಿಂ ದೇಶದ 10ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಇಬ್ರಾಹಿಂ ಅವರ ಪಕತಾನ್ ಹರಪಾನ್ ಮೈತ್ರಿಕೂಟ ಅತ್ಯಧಿಕ ಸ್ಥಾನ ಗೆದ್ದಿದೆ. ಆದರೆ ಬ ಹುಮತಕ್ಕೆ ಅಗತ್ಯದ 112 ಸ್ಥಾನ ಪಡೆಯದಿದ್ದರೂ ಸರಕಾರ ರಚಿಸಲು ದೊರೆ ಅವಕಾಶ ನೀಡಿದ್ದಾರೆ. 

Similar News