ರಶ್ಯ: ಮಾಲ್‍ನಲ್ಲಿ ಗುಂಡಿನ ದಾಳಿ : 4 ಮಂದಿ ಮೃತ್ಯು

Update: 2022-11-24 18:27 GMT

ಮಾಸ್ಕೊ, ನ.24: ದಕ್ಷಿಣ  ರಶ್ಯದ  ಕ್ರಿಮ್‍ಸ್ಕ್ (Krymsk)ನಗರದಲ್ಲಿನ ಶಾಪಿಂಗ್ ಸೆಂಟರ್‍ನಲ್ಲಿ  ಗುರುವಾರ  ನಡೆಸಿದ ಗುಂಡಿನ ದಾಳಿಯಲ್ಲಿ 4 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ತಾಸ್ (Proprietary Tas)ಸುದ್ಧಿಸಂಸ್ಥೆ ವರದಿ ಮಾಡಿದೆ.

ವ್ಯಕ್ತಿಯೊಬ್ಬ  ರಸ್ತೆಯಲ್ಲಿ ನಡೆದುಕೊಂಡು ಬಂದು ಶಾಪಿಂಗ್ ಸೆಂಟರ್‍ನತ್ತ ಗುಂಡು ಹಾರಿಸುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತಪಟ್ಟವರಲ್ಲಿ ಶಂಕಿತ ಆರೋಪಿಯೂ ಸೇರಿದ್ದಾನೆ ಎಂದು ವರದಿಯಾಗಿದೆ.

ಕ್ರಿಮ್‍ಸ್ಕ್ ನಗರ 2014ರಲ್ಲಿ ರಶ್ಯವು ಉಕ್ರೇನ್‍ನಿಂದ ಸ್ವಾಧೀನಪಡಿಸಿಕೊಂಡಿದ್ದ ಕ್ರಿಮಿಯಾ ಪ್ರಾಂತದಲ್ಲಿದೆ.

Similar News