×
Ad

ಫಿಫಾ ವಿಶ್ವಕಪ್‍ : ಸರ್ಬಿಯಾ ವಿರುದ್ಧ ಬ್ರೆಝಿಲ್ ಶುಭಾರಂಭ

Update: 2022-11-25 07:16 IST

ಹೊಸದಿಲ್ಲಿ: ರಿಚರ್ಲಿಸನ್ (Richarlison) ಅವರ ಅವಳಿ ಗೋಲುಗಳ ನೆರವಿನಿಂದ ಶುಕ್ರವಾರ ಫಿಫಾ ವಿಶ್ವಕಪ್‍ (FIFA World Cup 2022)ನ ಜಿ ಗುಂಪಿನ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡ ಸರ್ಬಿಯಾ ವಿರುದ್ಧ 2-0 ಅಂತರದ ಗೆಲುವಿನ ಮೂಲಕ ಶುಭಾರಂಭ ಮಾಡಿತು.

ಲೂಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧ ಗೋಲುರಹಿತವಾಗಿತ್ತು. ಆದರೆ ಉತ್ತರಾರ್ಧದಲ್ಲಿ ವಿಶ್ವದ ನಂಬರ್ ವನ್ ತಂಡ ತನ್ನ ಖ್ಯಾತಿಗೆ ತಕ್ಕಂತೆ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸಿ ಸರ್ಬಿಯಾ ವಿರುದ್ಧ ಮೇಲುಗೈ ಸಾಧಿಸಿತು. ರಿಚರ್ಲಿಸನ್ 62ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಇದಾದ 11 ನಿಮಿಷಗಳಲ್ಲಿ ಆಕರ್ಷಕ ಓವರ್‍ಹೆಡ್ ಕಿಕ್ ಮೂಲಕ ಮುನ್ನಡೆ ಹಿಗ್ಗಿಸಿದರು.

ಬ್ರೆಝಿಲ್‍ನ ಈ ವರ್ಷದ ಗೋಲ್ಡನ್ ಯೆಲ್ಲೋ ಸಮವಸ್ತ್ರದೊಂದಿಗೆ ಮಿಂಚಿದ ಮುನ್ಪಡೆ ಆಟಗಾರ, ಮೊದಲ ಗೋಲನ್ನು ಸುಲಭವಾಗಿ ಗಳಿಸಿದರೆ ಅದ್ಭುತ ಕಿಕ್ ಮೂಲಕ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ನೇಮರ್, ವಿನಿಶಿಯಸ್ ಜ್ಯೂನಿಯರ್, ರಪ್ಹಿನಾ ಮತ್ತು ರಿಚರ್ಲಿಸನ್ ಹೀಗೆ ನಾಲ್ವರು ಮುನ್ಪಡೆ ಆಟಗಾರರ ಮೂಲಕ ಕಣಕ್ಕೆ ಇಳಿದ ಈ ದಕ್ಷಿಣ ಅಮೆರಿಕ ತಂಡ ಮೊನಚಿನ ದಾಳಿ ನಡೆಸಿತು. ಆದರೂ ಮೊದಲಾರ್ಧದಲ್ಲಿ ಸರ್ಬಿಯಾದ ರಕ್ಷಣಾ ಆಟಗಾರರು ಬ್ರೆಝಿಲ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

Similar News