×
Ad

ಭಾರತ್ ಜೋಡೊ ಯಾತ್ರೆಗೆ ಸಿಂಧಿಯಾ ಸ್ವಾಗತ: ‘ಮನೆಗೆ ಮರಳುವ' ಸೂಚನೆಯಾಗಿರಬಹುದು ಎಂದ ಕಾಂಗ್ರೆಸ್

Update: 2022-11-25 10:31 IST

ಶಿಮ್ಲಾ: ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ Union Minister Jyotiraditya Scindia ಅವರು "ಸ್ವಾಗತ"  ಕೋರಿರುವುದು ಅವರು "ಮನೆಗೆ ಮರಳುವ" ಸೂಚನೆಯಾಗಿರಬಹುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರರು ಇಂದು ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ಬುಧವಾರ ಬೆಳಗ್ಗೆ ನೆರೆಯ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಬೋದರ್ಲಿ ಗ್ರಾಮವನ್ನು ಪ್ರವೇಶಿಸಿತು.

ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನವೆಂಬರ್ 23 ರಂದು ನಡೆದ ಯಾತ್ರೆಯನ್ನು ಉಲ್ಲೇಖಿಸಿ, "ಮಧ್ಯಪ್ರದೇಶದಲ್ಲಿ ಎಲ್ಲರಿಗೂ ಸ್ವಾಗತ" ಎಂದು ಹೇಳಿದ್ದರು.

ಕಾಂಗ್ರೆಸ್‌ನ ಮಾಜಿ ಸದಸ್ಯ, ಜ್ಯೋತಿರಾದಿತ್ಯ ಸಿಂಧಿಯಾ ಮಾರ್ಚ್ 2020 ರಲ್ಲಿ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು.

ಇದು 'ಘರ್ ವಾಪ್ಸಿ'ಯ ಸೂಚನೆಯಾಗಿರಬಹುದು ಎಂದು ಕಾಂಗ್ರೆಸ್ ವಕ್ತಾರ ಹಾಗೂ  ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ (ಎಚ್‌ಪಿಸಿಸಿ) ಮಾಜಿ ಅಧ್ಯಕ್ಷ ಕುಲದೀಪ್ ಸಿಂಗ್ ರಾಥೋಡ್ ಹೇಳಿದ್ದಾರೆ.

Similar News