ಐದು FIFA ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ

Update: 2022-11-25 06:57 GMT

ದೋಹಾ: ಪೋರ್ಚುಗೀಸ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ Cristiano Ronaldo ಅವರು ಗುರುವಾರ ಖತರ್‌ನಲ್ಲಿ ನಡೆದ ಗ್ರೂಪ್ 'ಎಚ್' ಪಂದ್ಯದಲ್ಲಿ ಘಾನಾ ವಿರುದ್ಧ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಐದು ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಪುರುಷ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

974 ಸ್ಟೇಡಿಯಂನಲ್ಲಿ  ನಡೆದ ಪಂದ್ಯದಲ್ಲಿ 37 ವರ್ಷ ವಯಸ್ಸಿನ ರೊನಾಲ್ಡೊ ಅವರು 65 ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಹೊಡೆದು ಇತಿಹಾಸ ನಿರ್ಮಿಸಿದರು.

ರೊನಾಲ್ಡೊ  2006 ರಲ್ಲಿ ಇರಾನ್ ವಿರುದ್ಧ ಗ್ರೂಪ್ ಹಂತದಲ್ಲಿ ಮೊದಲ ವಿಶ್ವಕಪ್ ಗೋಲು ಗಳಿಸಿದ್ದರು. 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಉತ್ತರ ಕೊರಿಯಾ ವಿರುದ್ಧ ರೊನಾಲ್ಡೊ ಒಂದು ಗೋಲು ಗಳಿಸಿದ್ದರು.  2014ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ಟೂರ್ನಿಯಲ್ಲಿ ಘಾನಾ ವಿರುದ್ಧ ಇನ್ನೊಂದು ಗೋಲು ಗಳಿಸಿದರು ಹಾಗೂ 2018ರಲ್ಲಿ ರಷ್ಯಾದಲ್ಲಿ ಒಟ್ಟು ನಾಲ್ಕು ಗೋಲು ಗಳಿಸಿದ್ದರು.

2018ರ ವಿಶ್ವಕಪ್ ರೊನಾಲ್ಡೊ ಪಾಲಿಗೆ ಅತ್ಯಂತ ಯಶಸ್ವಿ ಎನಿಸಿತ್ತು. ಸ್ಪೇನ್ ವಿರುದ್ಧ 3-3ರಿಂದ ಡ್ರಾ ಗೊಂಡ ಪಂದ್ಯದಲ್ಲಿ ಹ್ಯಾಟ್ರಿಕ್ ಸೇರಿದಂತೆ ಟೂರ್ನಿಯಲ್ಲಿ ಒಟ್ಟು 4 ಗೋಲು ಗಳಿಸಿದ್ದರು.

ಬ್ರೆಝಿಲ್ ಫಾರ್ವರ್ಡ್ ಆಟಗಾರ್ತಿ ಮಾರ್ಟಾ ಐದು ಮಹಿಳಾ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ್ದಾರೆ.

Similar News