×
Ad

ಅಮಿತಾಭ್ ಬಚ್ಚನ್ ಅವರ ಚಿತ್ರ, ಧ್ವನಿ ಅನುಮತಿಯಿಲ್ಲದೆ ಬಳಸುವಂತಿಲ್ಲ: ದಿಲ್ಲಿ ಹೈಕೋರ್ಟ್

Update: 2022-11-25 12:45 IST

ಹೊಸದಿಲ್ಲಿ: ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಹೆಸರು, ಚಿತ್ರ ಅಥವಾ ಧ್ವನಿಯನ್ನು ಅವರ ಅನುಮತಿಯಿಲ್ಲದೆ ಯಾರೂ ಬಳಸುವಂತಿಲ್ಲ ಎಂದು ದಿಲ್ಲಿ ಹೈಕೋರ್ಟ್ (Delhi High Court) ಇಂದು ಆದೇಶಿಸಿದೆ. ಅಮಿತಾಭ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನಂತರ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಗೂ ಸೂಚನೆ ನೀಡಿದ ನ್ಯಾಯಾಲಯ, ಫ್ಲ್ಯಾಗ್ ಮಾಡಲಾದ ಕಂಟೆಂಟ್ ಅನ್ನು ತೆಗೆದುಹಾಕುವಂತೆ ನಿರ್ದೇಶಿಸಿದೆ.

ತಮ್ಮ ಅನುಮತಿಯಿಲ್ಲದೆ  ತಮ್ಮ ಸೆಲೆಬ್ರಿಟಿ ಸ್ಥಾನಮಾನವನ್ನು ಹಲವರು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಬಳಸುತ್ತಿರುವವರ ಕುರಿತು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ಅಮಿತಾಭ್ ತಮ್ಮ ಹೆಸರು, ಚಿತ್ರ, ಧ್ವನಿ ಮತ್ತು ವ್ಯಕ್ತಿತ್ವ ವಿಶೇಷಣಗಳನ್ನು ರಕ್ಷಿಸುವಂತೆ ಕೋರಿದ್ದರು.

"ಕೆಲವರು ಟಿ-ಶರ್ಟ್‍ನಲ್ಲಿ ಅಮಿತಾಭ್ ಮುಖದ ಚಿತ್ರ ಹೊಂದಿದ್ದರೆ ಇನ್ನು ಕೆಲವರು ಪೋಸ್ಟರ್‍ಗಳನ್ನು ಮಾರಾಟ ಮಾಡುತ್ತಾರೆ ಹಾಗೂ ಇನ್ನೊಬ್ಬರು ಅಮಿತಾಭ್‍ಬಚ್ಚನ್.ಕಾಂ ಎಂಬ ಡೊಮೇನ್ ಹೆಸರನ್ನೂ ನೋಂದಣಿ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅರ್ಜಿ ಸಲ್ಲಿಸಲಾಗಿದೆ,'' ಎಂದು ಅಮಿತಾಭ್ ಪರ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ತಿಳಿಸಿದರು.

ಪುಸ್ತಕ ಪ್ರಕಾಶಕರು, ಟಿ-ಶರ್ಟ್ ತಯಾರಕರು ಮತ್ತು ಇತರ ಉದ್ಯಮಗಳು ತಮ್ಮ ಚಿತ್ರ, ಹೆಸರು ಅಥವಾ ಧ್ವನಿ ಬಳಸದಂತೆ ತಡೆ ಹೇರಬೇಕೆಂದೂ ನಟ ಕೋರಿದ್ದರು. 

ಇದನ್ನೂ ಓದಿ: ಗಡಿ ವಿವಾದ: ಕರ್ನಾಟಕದ ಬಸ್ಸಿಗೆ ಕಪ್ಪುಮಸಿ ಬಳಿದ ಮರಾಠ ಸಂಘದ ಕಾರ್ಯಕರ್ತರು

Similar News