FIFA ವಿಶ್ವಕಪ್ 2022: ಬ್ರೆಝಿಲ್ ತಂಡದ ನಾಯಕ ನೇಮರ್ ಗೆ ಗಾಯದ ಸಮಸ್ಯೆ

Update: 2022-11-25 07:19 GMT

ದೋಹಾ: ಸರ್ಬಿಯ ವಿರುದ್ಧ ಗುರುವಾರ ನಡೆದ ವಿಶ್ವಕಪ್‌ನಲ್ಲಿ ಬ್ರೆಝಿಲ್ ತಂಡದ ನಾಯಕ ನೇಮರ್ Brazil captain Neymar  ಪಾದದ ಉಳುಕಿಗೆ ಒಳಗಾಗಿದ್ದು, ಮುಂದಿನ 48 ಗಂಟೆಗಳಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಎದುರಿಸಲಿದ್ದಾರೆ ಎಂದು ರಾಷ್ಟ್ರೀಯ ತಂಡದ ವೈದ್ಯರು ಪಂದ್ಯದ ನಂತರ ತಿಳಿಸಿದ್ದಾರೆ.

ಬ್ರೆಝಿಲಿಯನ್ ಸೂಪರ್‌ಸ್ಟಾರ್ ತನ್ನ ಎದುರಾಳಿಗೆ ಡಿಕ್ಕಿ ಹೊಡೆದ ನಂತರ ಗಾಯಗೊಂಡಿದ್ದಾರೆ ಎಂದು ವೈದ್ಯ ರೋಡ್ರಿಗೋ ಲಾಸ್ಮಾರ್ ಹೇಳಿದ್ದಾರೆ.

ಸರ್ಬಿಯ ವಿರುದ್ಧ 2-0 ಗೋಲುಗಳಿಂದ ಜಯ ಗಳಿಸಿದ ಪಂದ್ಯದಲ್ಲಿ  79ನೇ ನಿಮಿಷದಲ್ಲಿ ನೇಮರ್ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದರು.

"ಉತ್ತಮವಾಗಿ ತಪಾಸಣೆ ನಡೆಸಲು ನಾವು 24 ರಿಂದ 48 ಗಂಟೆಗಳವರೆಗೆ ಕಾಯಬೇಕಾಗಿದೆ. ನಾವು ಯಾವುದೇ MRI ಅನ್ನು ನಿಗದಿಪಡಿಸಿಲ್ಲ'. ನೇಮರ್ ಚೇತರಿಕೆಯ ಬಗ್ಗೆ ನಾವು ಯಾವುದೇ ಅವಸರದ ಹೇಳಿಕೆ ನೀಡಲು ಸಾಧ್ಯವಿಲ್ಲ" ಎಂದು ಲಾಸ್ಮಾರ್ ಹೇಳಿದ್ದಾರೆ

ಪಂದ್ಯದ ಬಳಿಕ ನೇಮರ್ ಹೆಚ್ಚು ಕುಂಟುತ್ತಿರುವಂತೆ ಕಂಡುಬಂದಿದ್ದು, ಅವರ ಬಲ ಪಾದದಲ್ಲಿ ಊತ ಕಾಣಿಸಿಕೊಂಡಿದೆ.

ಬ್ರೆಝಿಲ್ ಪರ ಪೀಲೆ ಅವರ ಸಾರ್ವಕಾಲಿಕ ದಾಖಲೆಯ 77 ಗೋಲುಗಳನ್ನು ಸರಿಗಟ್ಟಲು ನೇಮರ್‌ಗೆ ಕೇವಲ ಎರಡು ಗೋಲುಗಳ ಅಗತ್ಯವಿದೆ.

2014 ರಲ್ಲಿ ನೇಮರ್ ಅವರ ಮೊದಲ ವಿಶ್ವಕಪ್ ಸಂಕಟದಿಂದ ಕೊನೆಗೊಂಡಿತು. ಕೊಲಂಬಿಯಾ ವಿರುದ್ಧ ಬ್ರೆಝಿಲ್‌ ಕ್ವಾರ್ಟರ್-ಫೈನಲ್ ಗೆದ್ದ ನಂತರ ನೇಮರ್ ಬೆನ್ನಿನ ಮೂಳೆ ಮುರಿತಕ್ಕೆ ಒಳಗಾಗಿದ್ದರು.

ನೇಮರ್ ಅವರಿಲ್ಲದೆ, ಆತಿಥೇಯರು ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ 7-1  ಅಂತರದ ಹೀನಾಯ ಸೋಲನ್ನು ಅನುಭವಿಸಿದ್ದರು.

ನಾಲ್ಕು ವರ್ಷಗಳ ನಂತರ ನೇಮರ್ ರಷ್ಯಾದಲ್ಲಿ ನಡೆದ ಪಂದ್ಯಾವಳಿಗೆ ಫಿಟ್ ಆಗಲು ಗಾಯದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಕೊನೆಯ ಎಂಟರಲ್ಲಿ ಬೆಲ್ಜಿಯಂ ವಿರುದ್ಧ ಸೋತಿದ್ದರಿಂದ ಬ್ರೆಝಿಲ್ ನಿರೀಕ್ಷಿಸಿದ ಎತ್ತರವನ್ನು ಮುಟ್ಟಲಿಲ್ಲ.

Similar News