ಫಿಫಾ ವಿಶ್ವಕಪ್: ವೇಲ್ಸ್ ವಿರುದ್ಧ ಇರಾನ್ ಜಯಭೇರಿ

Update: 2022-11-25 12:21 GMT

ದೋಹಾ, ನ.25: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಗ್ರೂಪ್ ‘ಬಿ’ ಪಂದ್ಯದಲ್ಲಿ ಇರಾನ್ ತಂಡ ಇಂಜುರಿ ಟೈಮ್ ನಲ್ಲಿ ವೇಲ್ಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದೆ.

ಅಹ್ಮದ್ ಬಿನ್ ಅಲಿ ಸ್ಟೇಡಿಯಮ್‌ನಲ್ಲಿ ಉಭಯ ತಂಡಗಳು ನಿಗದಿತ 90 ನಿಮಿಷಗಳ ಆಟದಲ್ಲಿ ಗೋಲು ಗಳಿಸುವಲ್ಲಿ ವಿಫಲವಾದವು. ವೇಲ್ಸ್ ತಂಡದ ಗೋಲ್ ಕೀಪರ್ ವೇಯ್ನ್ ಹೆನ್ನೆಸ್ಸ್ಸಿ 86ನೇ ನಿಮಿಷದಲ್ಲಿ ಕೆಂಪು ಕಾರ್ಡ್ ಪಡೆದರು.

ಕೊನೆಯ ಕ್ಷಣದಲ್ಲಿ ವೇಯ್ನಿ ಅನುಪಸ್ಥಿತಿಯ ಲಾಭ ಪಡೆದ ಇರಾನ್ ಆಟಗಾರರಾದ ಚೆಶ್ಮಿ(90+8) ಹಾಗೂ ರಮಿನ್ (90+11) ತಲಾ ಒಂದು ಗೋಲು ಗಳಿಸಿ ವೇಲ್ಸ್ ಗೆ ಮರ್ಮಾಘಾತ ನೀಡಿದರು.

ಈ ಗೆಲುವಿನ ಮೂಲಕ ಇರಾನ್ ಬಿ ಗುಂಪಿನಲ್ಲಿ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ.

Similar News