ಯಸ್ ಬ್ಯಾಂಕ್ ನ ರಾಣಾಕಪೂರ್ ಗೆ ದಿಲ್ಲಿ ಹೈಕೋರ್ಟ್ ಜಾಮೀನು

Update: 2022-11-25 15:26 GMT

ಹೊಸದಿಲ್ಲಿ,ನ.25:  466.51 ಕೋಟಿ ರೂ. ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ಯಸ್ ಬ್ಯಾಂಕ್(Yes Bank) ಸಂಸ್ಥಾಪಕ ರಾಣಾ ಕಪೂರ್(Rana Kapoor) ಗೆ ದಿಲ್ಲಿ ಹೈಕೋರ್ಟ್  ಗುರುವಾರ ಜಾಮೀನು ನೀಡಿದೆ. ಜಾರಿ ನಿರ್ದೇಶನಾಲಯವು  ಪ್ರಕರಣದ ತನಿಖೆ ನಡೆಸುತ್ತಿದೆ. ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್(Sudhir Kumar Jain) ನೇತೃತ್ವದ ರಾಣಾ ಕಪೂರ್ ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.

ತನ್ನ ವೈದ್ಯಕೀಯ ಪರಿಸ್ಥಿತಿಯು ಕೋವಿಡ್ ಸೋಂಕಿಗೊಳಗಾಗುವ ಅಪಾಯಕ್ಕೆ ಸಿಲುಕಿಸಿರುವುದರಿಂದ ತನಗೆ ಮಧ್ಯಂತರ ಜಾಮೀನು ಬಿಡುಗಡೆ ನೀಡಬೇಕೆಂದು ಪ್ರಸಕ್ತ ಜೈಲಿನಲ್ಲಿರುವ ರಾಣಾ ಕಪೂರ್ ಅವರು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದಾಗ್ಯೂ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನ ಪ್ರಶ್ನಿಸಿ ರಾಣಾ ಕಪೂರ್ ಹೈಕೋರ್ಟ್ ಮೆಟ್ಟಲೇರಿದ್ದರು.


ಯಸ್ ಬ್ಯಾಂಕ್ ನ ಸಹಸಂಸ್ಥಾಪಕ ರಾಣಾ ಕಪೂರ್ ಹಾಗೂ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(DEWAN HOUSING FINANCE LIMITED) ನ ಪ್ರವರ್ತಕರಾದತ ಕಪಿಲ್ ಹಾಗೂ ಧೀರಜ್ ವಾಧ್ವಾನ್ (Dheeraj Wadwan)5050 ಕೋಟಿ ರೂ. ಮೌಲ್ಯದ  ಹಣಕಾಸು ನಿಧಿಗಳನ್ನು ಸಂದೇಹಾಸ್ಪದವಾದ ವಹಿವಾಟುಗಳ ಮೂಲಕ ವರ್ಗಾವಣೆ ಮಾಡಿದ್ದರು.  ಈ ಹಿನ್ನೆಲೆಯಲ್ಲಿ ರಾಣಾ ಕಪೂರ್ ಅವರನ್ನು  ಕಪ್ಪುಹಣ ಬಿಳುಪು ಕಾಯ್ದೆ (ಪಿಎಂಎಲ್ಎ) ಕಾಯ್ದೆಯಡಿ 2020ರಲ್ಲಿ ಬಂಧಿಸಲಾಗಿತ್ತು.


ತನಗೆ ಹಾಗೂ ತನ್ನ ಕುಟುಂಬದ ಸದಸ್ಯರಿಗೆ  ಅಕ್ರಮವಾಗಿ ಆರ್ಥಿಕ ಲಾಭ ದೊರೆಯುವಂತೆ ಮಾಡುವುದಕ್ಕಾಗಿ ರಾಣಾ ಕಪೂರ್ ಅವರು ತನ್ನ ಅಧಿಕೃತ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯವು ದೋಷಾರೋಪ ಪಟ್ಟಿಯಲ್ಲಿ ಆಪಾದಿಸಿತ್ತು.

Similar News