ಮುಂಬೈ: ದಡಾರಕ್ಕೆ ಬಲಿಯಾದವರ ಸಂಖ್ಯೆ 9ಕ್ಕೇರಿಕೆ

Update: 2022-11-25 15:38 GMT

ಮುಂಬೈ,ನ.25: ವಾಣಿಜ್ಯ ನಗರಿ ಮುಂಬೈಯಲ್ಲಿ ದಡಾರ(Measles) ಕಾಯಿಲೆಯ 22 ಪ್ರಕರಣಗಳು ವರದಿಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘‘ದಡಾರದ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಪೂರ್ವ ಮುಂಬೈಯಲ್ಲಿ ದಡಾರದ ಅಪಾಯ ಅಧಿಕವಾಗಿರುವ ಪ್ರದೇಶವಾಗಿದೆ. ಮುಂಬೈನ ಇತರ ಭಾಗಗಳಲ್ಲಿಯೂ ಗರಿಷ್ಠ ಸಂಖ್ಯೆಯ ದಡಾರದ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಒಟ್ಟು 22 ದಡಾರದ ಪ್ರಕರಣಗಳು ವರದಿಯಾಗಿದ್ದು, 9  ಸಾವುಗಳು ಸಂಭವಿಸಿವೆ’’ ಎಂದು ಬೃಹನ್ ಮುಂಬಯಿ  ನಗರಪಾಲಿಕೆಯ  ಕಾರ್ಯನಿರ್ವಾಹಕ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಬುಧವಾರ 8 ತಿಂಗಳು ಪ್ರಾಯದ ಮಗುವೊಂದು ಸಾವನ್ನಪ್ಪುವುದರೊಂದಿಗೆ ಈ ವರ್ಷ ಮುಂಬೈಯಲ್ಲಿ  ದಡಾರಕ್ಕೆ ಬಲಿಯಾದವರ ಸಂಖ್ಯೆ 12ಕ್ಕೇರಿದೆ. ಮುಂಬೈಯಲ್ಲಿ 2020 ರಲ್ಲಿ 25 ಹಾಗೂ 2021 ರಲ್ಲಿ 9 ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ದಡಾರದ  ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ  ಉಂಟಾಗಿರುವ ಹಿನ್ನೆಲೆಯಲ್ಲಿ 9 ತಿಂಗಳಿನಿಂದ 5 ವರ್ಷ ವಯಸ್ಸಿನವರೆಗಿನ ಮಕ್ಕಳಿಗೆ ಲಸಿಕೆ ನೀಡುವಂತೆ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.


ದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗಿರುವ ದಡಾರ ಪ್ರಕರಣಗಳ ನಿಯಂತ್ರಣಕ್ಕಾಗಿ ಕೇಂದ್ರ  ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ರಾಂಚಿ (ಜಾರ್ಖಂಡ್), ಅಹ್ಮದಾಬಾದ್ (ಗುಜರಾತ್) ಹಾಗೂ ಮಲಪ್ಪುರಂ (ಕೇರಳ) ಜಿಲ್ಲೆಗಳಿಗೆ ಮೂವರು ಸದಸ್ಯರ ಉನ್ನತ ಮಟ್ಟದ ತಂಡವನ್ನು  ನಿಯೋಜಿಸಿದೆ.

ದಡಾರದ ನಿಯಂತ್ರಣ ಹಾಗೂ ನಿರ್ಮೂಲನೆಗಾಗಿ ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನೆರವಾಗಲಿವೆ.

Similar News