ಚೀನಾ: ಬೆಂಕಿ ದುರಂತದಲ್ಲಿ 10 ಮಂದಿ ಮೃತ್ಯು; 9 ಮಂದಿಗೆ ಗಾಯ

Update: 2022-11-25 16:20 GMT

ಬೀಜಿಂಗ್, ನ.25: ಚೀನಾದ ವಾಯವ್ಯ ಕ್ಸಿನ್ಜಿಯಾಂಗ್(Xinjiang) ಪ್ರಾಂತದಲ್ಲಿನ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದು ಇತರ 9 ಮಂದಿ ಗಾಯಗೊಂಡಿರುವುದಾಗಿ ಸರಕಾರಿ ಸ್ವಾಮ್ಯದ ಕ್ಸಿನ್ಹುವಾ (Xinhua)ಸುದ್ಧಿಸಂಸ್ಥೆ ವರದಿ ಮಾಡಿದೆ.

ಕ್ಸಿನ್ಜಿಯಾಂಗ್ ನ ಉಯಿಗರ್ ಸ್ವಾಯತ್ತ ಪ್ರದೇಶದಲ್ಲಿನ ಬಹುಮಹಡಿ ಕಟ್ಟಡದಲ್ಲಿ ಗುರುವಾರ ರಾತ್ರಿ ದುರಂತ ಸಂಭವಿಸಿದ್ದು 3 ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ. 10 ಮಂದಿ ಮೃತಪಟ್ಟಿದ್ದು 9 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇಲೆಕ್ಟಿçಕ್ ಶಾರ್ಟ್ ಸರ್ಕ್ಯೂಟ್ ದುರಂತಕ್ಕೆ ಕಾರಣ  ಎಂದು ವರದಿ ಹೇಳಿದೆ.

Similar News