ಗುಜರಾತ್ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ದೂರದೃಷ್ಟಿ ಇಲ್ಲ: ಹಾರ್ದಿಕ್ ಪಟೇಲ್

Update: 2022-11-26 05:37 GMT

 ವಿರಾಮಗಮ್ (ಗುಜರಾತ್): ತಮ್ಮ ಹಿಂದಿನ ಪಕ್ಷ ಕಾಂಗ್ರೆಸ್‌ಗೆ ಗುಜರಾತ್ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ . ಆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದಕ್ಷಿಣದಲ್ಲಿ ತಮ್ಮ 'ಭಾರತ್ ಜೋಡೋ ಯಾತ್ರೆ'ಯಲ್ಲಿ ನಿರತರಾಗಿದ್ದಾರೆ" ಎಂದು ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಯುವ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ Hardik Patel, the young Patidar community leader ಅವರು ಇಂದು ಹೇಳಿದರು,

ಕಾಂಗ್ರೆಸ್ ಉನ್ನತ ನಾಯಕರ ಯಾತ್ರೆಯು  ಚುನಾವಣೆ ನಡೆಯುತ್ತಿರುವ ಗುಜರಾತ್ ಮೂಲಕ ಹಾದುಹೋಗುತ್ತಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದ ಪಟೇಲ್ ಅವರು ಕಾಂಗ್ರೆಸ್ "ಯಾರನ್ನೂ ತೊರೆಯುವುದನ್ನು ಎಂದಿಗೂ ತಡೆಯುವುದಿಲ್ಲ. ಆ  ಪಕ್ಷಕ್ಕೆ "ಗುಜರಾತಿಗಳ ಅಗತ್ಯವಿಲ್ಲ" ಎಂದು ವ್ಯಂಗ್ಯವಾಡಿದರು.

ಇತ್ತೀಚೆಗೆ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನವನ್ನು ತ್ಯಜಿಸಿದ ನಂತರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡ ಅವರು  ತಮ್ಮ ಮೊದಲ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.   ಪಾಟಿದಾರ್ ಮೀಸಲಾತಿ ಹೋರಾಟದ ಸಮಯದ ಕೆಲವು ಪ್ರಕರಣಗಳು ಸೇರಿದಂತೆ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಜೈಲು ಪಾಲಾಗಬಹುದು ಎಂಬ ಭಯವು ಅವರನ್ನು ಪಕ್ಷ ಬದಲಾಯಿಸುವಂತೆ ಮಾಡಿದೆ ಎಂಬುದನ್ನು ನಿರಾಕರಿಸಿದರು.

"ನನ್ನ ಮೇಲೆ ಇನ್ನೂ 32 ಪ್ರಕರಣಗಳಿವೆ. ಪಕ್ಷಕ್ಕೆ ಸೇರುವುದರಿಂದ ನನ್ನನ್ನು ಮುಕ್ತಗೊಳಿಸಬಹುದು ಎಂದು ನೀವು ಭಾವಿಸಿದರೆ ಅದು ಸರಿಯಲ್ಲ. ಕಾನೂನು ಹಾಗೂ ನ್ಯಾಯಾಲಯಗಳು ಸ್ವತಂತ್ರವಾಗಿವೆ" ಎಂದು ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸದ 29 ವರ್ಷದ ಪಟೇಲ್  ಹೇಳಿದರು.

Similar News