ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ರನ್ನು ಜೈಲಿನ ಅಧಿಕಾರಿ ಭೇಟಿ ಮಾಡಿದ ವೀಡಿಯೊ ಬಿಡುಗಡೆ ಮಾಡಿದ ಬಿಜೆಪಿ

Update: 2022-11-26 08:12 GMT

ಹೊಸದಿಲ್ಲಿ: ದಿಲ್ಲಿ ಸಚಿವ ಸತ್ಯೇಂದ್ರ ಜೈನ್  Satyendar Jain ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನನ್ನು ರಾತ್ರಿ 8 ಗಂಟೆಯ ನಂತರ ಭೇಟಿ ಮಾಡಿದ್ದಾರೆ ಎಂದು ಹೇಳಿದೆ.

ಬಿಜೆಪಿ ಬಿಡುಗಡೆ ಮಾಡಿರುವ ಹೊಸ ವೀಡಿಯೊದಲ್ಲಿ ಸೂಪರಿಂಟೆಂಡೆಂಟ್ ಜೈಲಿನ ಕೋಣೆಗೆ ಪ್ರವೇಶಿಸಿದಾಗ, ಸತ್ಯೇಂದ್ರ ಜೈನ್‌ ಅವರ ಸೆಲ್‌ನೊಳಗೆ ಹಲವಾರು ಜನರು ಇರುವುದು ಕಂಡುಬಂದಿದೆ. ಈ ದೃಶ್ಯಾವಳಿಗಳು ಸೆಪ್ಟೆಂಬರ್‌ ನಲ್ಲಿ ಸೆರೆ ಹಿಡಿಯಲಾಗಿದ್ದು, ಜೈನ್‌ಗೆ ವಿಐಪಿ ಆತಿಥ್ಯ ನೀಡಿರುವ  ಜೈಲು ಅಧಿಕಾರಿ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.

"ತಿಹಾರ್‌ನ ಮತ್ತೊಂದು ವೀಡಿಯೊವನ್ನು ಮಾಧ್ಯಮಗಳು ಹೊರಹಾಕಿವೆ. ಜೈಲು ಅಧೀಕ್ಷಕನನ್ನು ಅಮಾನತುಗೊಳಿಸಲಾಗಿದೆ" ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಝಾದ್ ಜೈ ಹಿಂದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆಯುತ್ತಿರುವ ವಿಡಿಯೋ ಸೋರಿಕೆಯಿಂದಾಗಿ ಜೈನ್ ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

Similar News