ಕಾಫಿ-ಕೋಸ್ಟ್ ಕಾರ್ಯಕ್ರಮ: ಟ್ರಾವೆಲ್ಸ್ ಪ್ರತಿನಿಧಿಗಳೊಂದಿಗೆ ಸಂವಾದ

Update: 2022-11-26 14:56 GMT

ಉಡುಪಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ, ಮಂತ್ರ ಪ್ರವಾಸೋದ್ಯಮ, ಕಂಟ್ರಿ ಇನ್ ಅಂಡ್ ಸೂಟ್ಸ್ ಮಣಿಪಾಲದ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಕಾಫಿ ಅಂಡ್ ಕೋಸ್(ಪಾನ್ ಇಂಡಿಯಾ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ 2 ದಿನಗಳ ಕಾಲ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ವಿವರಗಳನ್ನು ಹಾಗೂ ಚಟುವಟಿಕೆಗಳನ್ನು ತಿಳಿಯಲು ಭಾರತ ದಾದ್ಯಂತ ಇರುವ ೫೫ ಹೆಸರಾಂತ ಟ್ರಾವೆಲ್ ಕಂಪನಿ ಪ್ರತಿನಿಧಿಗಳು, ಟ್ರಾವೆಲ್ ಏಜೆಂಟ್, ಬ್ಲಾಗರ್ಸ್, ಬರಹಗಾರರು ಆಗಮಿಸಿದ್ದು, ಶುಕ್ರವಾರ ಮಣಿಪಾಲದ ಹೊಟೇಲ್ ಕಂಟ್ರಿ ಇನ್ ಅಂಡ್ ಸೂಟ್ಸ್‌ನಲ್ಲಿ ಸಂವಾದ ಕಾರ್ಯಕ್ರಮ ಜರಗಿತು.

ಈ ಕಾರ್ಯಕ್ರಮದಲ್ಲಿ ಶಾಸಕ ಕೆ.ರಘುಪತಿ ಭಟ್, ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಕರ್ನಾಟಕ ಟೂರಿಸಂ ಫೋರಂ ಸಂಸ್ಥಾಪಕರಾದ ರವಿ, ನಿರ್ದೇಶಕ ಸಂದೀಪ್ ದುಮಾಲೆ, ಕಾರ್ಯದರ್ಶಿ ರಮ್ಯಾ ಉಪಸ್ಥಿತರಿದ್ದರು.

Similar News