26 ಅಂತಸ್ತಿನ ಹಂದಿ ಫಾರ್ಮ್ ನಿರ್ಮಿಸುತ್ತಿರುವ ಚೀನಾ: ರೋಗ ಹರಡುವ ಭೀತಿ‌

Update: 2022-11-26 17:23 GMT

ಬೀಜಿಂಗ್, ನ.26: ವಿಶ್ವದಲ್ಲಿ ಅತ್ಯಂತ ದೊಡ್ಡ ಹಂದಿ ಸಾಕಾಣಿಕಾ ಕೇಂದ್ರವನ್ನು ಚೀನಾ (China)ನಿರ್ಮಿಸುತ್ತಿದ್ದು , ಇದಕ್ಕಾಗಿ 26 ಅಂತಸ್ತಿನ ಕಟ್ಟಡವೊಂದು ನಿರ್ಮಾಣಗೊಳ್ಳುತ್ತಿದೆ ಎಂದು ವರದಿಯಾಗಿದೆ.

ಚೀನಾದಲ್ಲಿ ಜನಪ್ರಿಯ ಪ್ರೊಟೀನ್ ಖಾದ್ಯ ಪೋರ್ಕ್ ಸಿದ್ಧಪಡಿಸಲು ಅಗತ್ಯವಿರುವ ಹಂದಿಗಳನ್ನು ಸಾಕುವುದು ಈ ಯೋಜನೆಯ ಉದ್ದೇಶವಾಗಿದೆ. 8 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಫಾರ್ಮ್ ನಲ್ಲಿ 6,50,000 ಪ್ರಾಣಿಗಳಿಗೆ ಸ್ಥಳಾವಕಾಶವಿದ್ದು ಫಾರ್ಮ್ಹೌಸ್ ಮಧ್ಯಚೀನಾದ ಹುಬೈ ಪ್ರಾಂತದ ಎಝೋಹ್ ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿದೆ. 473 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ಫಾರ್ಮ್ ನಲ್ಲಿ ಗ್ಯಾಸ್, ತಾಪಮಾನ ಮತ್ತು ವಾತಾಯನ ನಿಯಂತ್ರಿಸುವ ,  ಸ್ವಯಂಚಾಲಿತ ಆಹಾರ ಒದಗಿಸುವ ವ್ಯವಸ್ಥೆಯಿದೆ.

ಆದರೆ ಈ ಹಂದಿ ಫಾರ್ಮ್ನಿಂದ ಮುಂದಿನ ದಿನದಲ್ಲಿ ದೊಡ್ಡ ರೋಗ ಹರಡುವ ಸಾಧ್ಯತೆ ಮತ್ತು ಆತಂಕ ಹೆಚ್ಚಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.  ಒಂದು ವೇಳೆ ಫಾರ್ಮ್ಹೌಸ್ನಲ್ಲಿ ಒಂದು ಹಂದಿಗೆ ರೋಗ ಕಾಣಿಸಿಕೊಂಡರೆ ಅದು ಕಾಡ್ಗಿಚ್ಚಿನಂತೆ ಹರಡಿ ನಿಯಂತ್ರಿಸುವುದು ಕಷ್ಟವಾಗಲಿದೆ ಎಂದು ನ್ಯೂಯಾರ್ಕ್ ವಿವಿಯ ಸಹಾಯಕ ಪ್ರೊಫೆಸರ್ ಮ್ಯಾಥ್ಯೂ ಹಯೇಕ್ (Matthew Hayek)ಹೇಳಿದ್ದಾರೆ.

Similar News