ಮಂಗಳೂರು: ಹೋಮ್ ಆರ್ಟ್ ಲೈಟ್ಸ್ ಶುಭಾರಂಭ

Update: 2022-11-27 08:44 GMT

ಮಂಗಳೂರು, ನ.27: ನಗರದ ಪಾಂಡೇಶ್ವರದ ಲ್ಲಿನ ಅರಿಸ್ಟಾ ಎನ್ ಕ್ಲೇವ್ ಸಂಕೀರ್ಣದಲ್ಲಿಂದು ಹೆವಲ್ಸ್ ಬ್ರಾಂಡೆಡ್ ಲೈಟಿಂಗ್ಸ್ ಉತ್ಪನ್ನಗಳ ಶೋರೂಂ 'ಹೋಮ್ ಆರ್ಟ್ಸ್ ಲೈಟ್ಸ್' ಮಳಿಗೆ ಶುಭಾರಂಭಗೊಂಡಿತು.  ಉದ್ಘಾಟಕರಾಗಿ ಆಗಮಿಸಿದ ಹೆವೆಲ್ಸ್ ಇಂಡಿಯಾ ಲಿ. ಸಂಸ್ಥೆಯ ಕರ್ನಾಟಕ ವಿಭಾಗದ ಶಾಖಾ ಮುಖ್ಯಸ್ಥ  ನವೀನ್ ಚಂದ್ರನ್  ಮತ್ತು ಹೆವಲ್ಸ್ ಇಂಡಿಯಾ ಲಿ. ಸಂಸ್ಥೆಯ ಹಿರಿಯ ಜನರಲ್ ಮ್ಯಾನೇಜರ್ ಸುರೇಶ್ ಕುಮಾರ್  ಉಪಸ್ಥಿತಿಯಲ್ಲಿ ಶಿರಿನ್ ಎಂಟರ್ ಪ್ರೈಸಸ್ ಸಂಸ್ಥೆಯ ವ್ಯಸ್ಥಾಪಕ ನಿರ್ದೇಶಕ ಮುನೀರ್ ಅಹ್ಮದ್ ಅವರ ತಾಯಿ ಬಿಫಾತಿಮಾ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ನವೀನ್ ಚಂದ್ರನ್, ಹೆವಲ್ಸ್ ಉತ್ಪನ್ನಗಳು ತನ್ನ ಗುಣಮಟ್ಟದ ಮತ್ತು ಸುರಕ್ಷತೆ, ಆಕರ್ಷಕ ವಿನ್ಯಾಸ ಹಾಗೂ ದೀರ್ಘ ಬಾಳಿಕೆಯ ಕಾರಣ ಗ್ರಾಹಕರ ವಿಶ್ವಾಸ ಗಳಿಸಿದೆ. ಮಂಗಳೂರಿನ ಹೋಮ್ ಆರ್ಟ್ ಲೈಟ್ಸ್ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.

 ‌ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮಹಾನಗರ ಪಾಲಿಕೆಯ ಸದಸ್ಯ ಅಬ್ದುಲ್ಲತೀಫ್, ಪಾಂಡೇಶ್ವರ ಠಾಣಾ ಪೊಲೀಸ್ ಇನ್ ಸ್ಪೆಕ್ಟರ್ ಲೋಕೇಶ್, ಶಿರಿನ್ ಎಂಟರ್ ಪ್ರೈಸಸ್ ನ (ದಾವಣಗೆರೆಯ) ಪ್ರತಿನಿಧಿ ಅಶ್ರಫ್, ಅಬ್ದುಲ್ ಹಮೀದ್, ಹೆವಲ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಪ್ರತಿನಿಧಿಗಳಾದ ರೂಪಾಂಜನ್, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.

ಶಿರಿನ್ ಎಂಟರ್ ಪ್ರೈಸಸ್ ಸಂಸ್ಥೆಯ ವ್ಯಸ್ಥಾಪಕ ನಿರ್ದೇಶಕ ಮುನೀರ್ ಅಹ್ಮದ್ ಅತಿಥಿಗಳನ್ನು ಸ್ವಾಗತಿಸಿದರು. ರಿಯಾಝ್ ಅಶ್ರಫ್  ಕಾರ್ಯಕ್ರಮ ಸಂಯೋಜಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Similar News