×
Ad

ಫಿಫಾ ವಿಶ್ವಕಪ್: ಬೆಲ್ಜಿಯಮ್‌ಗೆ ಸೋಲುಣಿಸಿದ ಮೊರೊಕ್ಕೊ

Update: 2022-11-27 20:32 IST

ದೋಹಾ, ನ.27: ಫಿಫಾ ವಿಶ್ವಕಪ್‌ನ ಗ್ರೂಪ್ ‘ಎಫ್’ ಪಂದ್ಯದಲ್ಲಿ ಮೊರೊಕ್ಕೊ ತಂಡ ಬಲಿಷ್ಠ ಬೆಲ್ಜಿಯಮ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಶಾಕ್ ನೀಡಿದೆ.

 ರವಿವಾರ ಅಲ್ ತುಮಾಮ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಮೊರೊಕ್ಕೊ ತಂಡ ವಿಶ್ವದ ನಂ.2ನೇ ತಂಡ ಬೆಲ್ಜಿಯಮ್‌ನ ಬೆವರಿಳಿಸಿದೆ.

 ಮೊರೊಕ್ಕೊ ಪರ 73ನೇ ನಿಮಿಷದಲ್ಲಿ ಫ್ರಿ ಕಿಕ್ ಮೂಲಕ ಅಬ್ದುಲ್ ಹಮೀದ್ ಸಾಬಿರಿ ಮೊದಲ ಗೋಲು ಗಳಿಸಿದರು. ಝಕರಿಯಾ ಅಬು ಖಲೀಲ್ ದ್ವಿತೀಯಾರ್ಧದ ಹೆಚ್ಚುವರಿ ಸಮಯದಲ್ಲಿ (90+2ನೇ ನಿಮಿಷದಲ್ಲಿ ) ಗೋಲು ಗಳಿಸಿ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

 ವಿಶ್ವದ ನಂ.22ನೇ ತಂಡ ಮೊರೊಕ್ಕೊ 1998ರ ಬಳಿಕ ವಿಶ್ವಕಪ್‌ನಲ್ಲಿ ಮೊದಲ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿತು.

ಈ ಗೆಲುವಿನೊಂದಿಗೆ ಮೂರಂಕವನ್ನು ಗಳಿಸಿರುವ ಮೊರೊಕ್ಕೊ ತಂಡ ಒಟ್ಟು 4 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಮೊದಲ ಸ್ಥಾನಕ್ಕೇರಿದೆ. ಬೆಲ್ಜಿಯಮ್ ಮೊದಲ ಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ.
 

Similar News