×
Ad

ಬಸ್ಸಿನಿಂದ ಬಿದ್ದು ಮೃತ್ಯು

Update: 2022-11-27 21:26 IST

ಶಂಕರನಾರಾಯಣ, ನ.27:  ಬಸ್ಸನ್ನು ಒಮ್ಮೇಲೆ ಚಲಾಯಿಸಿದ ಪರಿಣಾಮ ಇಳಿಯುತ್ತಿದ್ದ ವ್ಯಕ್ತಿಯೊಬ್ಬರು ಬಿದ್ದು ಗಂಭೀರಗಾಯಗೊಂಡು ಮೃತಪಟ್ಟ ಘಟನೆ ನ.26ರಂದು ಸಂಜೆ ವೇಳೆ ಅಲ್ಬಾಡಿ ಗ್ರಾಮದ ಕೊಂಚಾಡಿ ಹಳ ನೀರುಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಹಳನೀರುಬೆಟ್ಟು ನಿವಾಸಿ ಚಂದ್ರಶೇಖರ  ಎಂದು ಗುರುತಿಸಲಾಗಿದೆ.

ಇವರು ಬಸ್ಸಿನಲ್ಲಿ ಶೇಡಿಮನೆಗೆ ತಲುಪಿಸಲು ವೀಳ್ಯದೆಲೆ ಪಾರ್ಸಲ್ ನೀಡಿ ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಬಸ್ಸನ್ನು ಚಾಲಕ ಒಮ್ಮೇಲೆ ಚಲಾಯಿಸಿದ ಎನ್ನಲಾಗಿದೆ. ಇದರಿಂದ ಬಸ್ಸಿನಿಂದ ಕೆಳಗಡೆ ಬಿದ್ದು ಗಂಭೀರವಾಗಿ ಗಾಯ ಗೊಂಡ ಚಂದ್ರಶೇಖರ್, ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News