ಉಡುಪಿ: ವಿಶ್ವ ಮಧುಮೇಹ ದಿನಾಚರಣೆಯ ಸಮಾರೋಪ

ಅಂಗಾಂಗ ದಾನದ ಕುರಿತು ಮಾಹಿತಿ

Update: 2022-11-28 13:32 GMT

ಉಡುಪಿ: ವಿಶ್ವ ಮದುಮೇಹ ದಿನಾಚರಣೆಯ ಸಮಾರೋಪ ಸಮಾರಂಭ  ಹಾಗೂ ರಾಷ್ಟ್ರೀಯ ಅಂಗಾಗ ದಾನ ದಿನಾಚಣೆಯ ಅಂಗವಾಗಿ ಐಎಂಎ ಉಡುಪಿ ಕರಾವಳಿ ಮತ್ತು ಲಯನ್ಸ್ ಕ್ಲಬ್ ಬ್ರಹ್ಮಗಿರಿ ಇವರು ಜಂಟಿಯಾಗಿ ಆಯೋಜಿಸಿದ್ದ ಜನಸಾಮಾನ್ಯರಿಗೆ ಮಧುಮೇಹ ಮತ್ತು  ಅಂಗಾಗ ದಾನದ ಬಗ್ಗೆ ಮಾಹಿತಿ ಮತ್ತು ತಪಾಸಣಾ ಶಿಬಿರ ಬ್ರಹ್ಮಗಿರಿಯಲ್ಲಿರುವ ಐಎಂಎ ಭವನದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ವೈದ್ಯ  ಡಾ.ಅಶೋಕ್ ಕುಮಾರ್ ವೈ.ಜಿ.  ಉದ್ಘಾಟಿಸಿ ಮಾತನಾಡಿ, ಮಧುಮೇಹದ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು. ಬ್ರಹ್ಮಗಿರಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ನಾಯಕ್ ಹಾಗೂ ಜಿಲ್ಲಾ ದೃಷ್ಟಿ ಕೇಂದ್ರದ ಸಂಯೋಜಕ ವಾದಿರಾಜ್ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಎ ಉಡುಪಿ ಕರಾವಳಿಯ ಉಪಾಧ್ಯಕ್ಷರಾ ಡಾ.ರಾಜಲಕ್ಷ್ಮೀ ವಹಿಸಿದ್ದು, ಅತಿಥಿಗಳನ್ನು ಸ್ವಾಗತಿಸಿ ಕೊನೆಯಲ್ಲಿ  ವಂದಿಸಿದರು.

ಮಣಿಪಾಲ ಕೆಎಂಸಿ ನ್ಯೂರೋಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಮೆನನ್ ಅಂಗಾಂಗ ದಾನದ ಕುರಿತು ಹಾಗೂ ಕೆಎಂಸಿ ಮಣಿಪಾಲದ ಕಣ್ಣಿನ ತಜ್ಞರಾದ ಡಾ. ಸುಲತಾ ಭಂಡಾರಿ ಕಣ್ಣು ದಾನದ ಕುರಿತು ಮಾಹಿತಿಗಳನ್ನು ಹಂಚಿಕೊಂಡು ಅಂಗಾಗ ದಾನದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಧುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್, ತಜ್ಞ ವೈದ್ಯರಾದ  ಡಾ.ರಾಜಲಕ್ಷ್ಮೀ, ಡಾ.ಸತೀಶ್ ನಾಯಕ್, ಡಾ.ವಿಜಯ್ ಶೇಟ್, ಡಾ. ಅರ್ಜುನ್ ಬಲ್ಲಾಳ್, ಡಾ.ಮಾನಸ್, ಡಾ.ಸ್ನೇಹ ಆಚಾರ್ಯ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮ ನಡೆಸಿಕೊಟ್ಟರು. 

Similar News