ಜನಶಿಕ್ಷಣ ಟ್ರಸ್ಟ್‌ನಿಂದ ಜಾಗೃತಿ ಅಭಿಯಾನ

Update: 2022-11-28 17:55 GMT

ಮಂಗಳೂರು: ಸಂವಿಧಾನ ಜಾಗೃತಿ ಅಭಿಯಾನದಡಿ ಮುಡಿಪು ಜನಶಿಕ್ಷಣ ಟ್ರಸ್ಟ್ ವತಿಯಿಂದ ಬಾಳೆಪುಣಿ, ಕುರ್ನಾಡು ಗ್ರಾಪಂ ವ್ಯಾಪ್ತಿಯ ಮುಡಿಪು, ನವಗ್ರಾಮ, ಹೂಹಾಕುವಕಲ್ಲು, ಅನಂಗ ಜನವಸತಿ ಪ್ರದೇಶ, ಅಂಗನವಾಡಿ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಶನಿವಾರ ಸಂವಿಧಾನ ದಿನ ಆಚರಿಸಲಾಯಿತು.

ಮುಡಿಪು ಸ್ಮೈಲ್ ಸ್ಕಿಲ್ ಸ್ಕೂಲ್ ,ಪ್ರಜ್ಞಾ ವಿ.ಟಿ.ಸಿ., ಗ್ರಾಪಂ ಸದಸ್ಯೆಯರಾದ ಜೋಹಾರ, ಸೆಮೀಮಾ ಅವರ ಮನೆಯಂಗಳ, ಹೂಹಾಕುವಕಲ್ಲು ಇಸ್ಮಾಯಿಲ್ ಅವರ ತ್ಯಾಜ್ಯ ನಿರ್ವಹಣಾ ಕೇಂದ್ರ, ಅನಂಗ ಅಂಗನವಾಡಿಯಲ್ಲಿ ಸಂವಿಧಾನ ಪೀಠಿಕೆ ఓದು ಸಂವಿಧಾನದ ಆಶಯಗಳನ್ನು ತಿಳಿಸಿ, ಪ್ರತಿಜ್ಞೆ ಬೋಧಿಸಿ ನ್ಯಾಯಮೂರ್ತಿ ಎಚ್‌.ಎಂ. ನಾಗಮೋಹನ್‌ದಾಸ್ ಅವರ ಸಂವಿಧಾನ ಪುಸ್ತಕಗಳನ್ನು ವಿತರಿಸುವ ಮೂಲಕ ಸಂವಿಧಾನ ದಿನ ಆಚರಿಸಲಾಯಿತು.

ಸಂವಿಧಾನ ಜಾಗೃತಿ ಅಭಿಯಾನದಡಿ ಮುಡಿಪು ಜನಶಿಕ್ಷಣ ಟ್ರಸ್ಟ್ ವತಿಯಿಂದ ಬಾಳೆಪುಣಿ, ಕುರ್ನಾಡು ಗ್ರಾಪಂ ವ್ಯಾಪ್ತಿಯ ಮುಡಿಪು, ನವಗ್ರಾಮ, ಹೂಹಾಕುವಕಲ್ಲು, ಅನಂಗ ಜನವಸತಿ ಪ್ರದೇಶ, ಅಂಗನವಾಡಿ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಸಂವಿಧಾನ ದಿನ ಆಚರಿಸಲಾಯಿತು.

ಮಹಾತ್ಮ ಗಾಂಧಿ ನರೇಗಾ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಸಂವಿಧಾನದ ಆಶಯಗಳನ್ನುತಿಳಿಸಿದರು. ವಿವಿಧ ಸೇವಾ ಸಂಸ್ಥೆಗಳ ಪ್ರತಿನಿಧಿಗಳಾದ ಕೃಷ್ಣ ಮೂಲ್ಯ, ಚೇತನ್,  ಶರತ್ ಕುಮಾರ್, ಜೋಹಾರ, ಸೆಮೀಮಾ, ಪ್ರಜ್ಞಾ, ಕಾವೇರಿ, ಸದಾನಂದ, ಧನಲಕ್ಷ್ಮಿ, ಪೂರ್ಣಿಮಾ, ಲಿಲ್ಲಿ ಮೇರಿ ಭಾಗವಹಿಸಿದ್ದರು.

Similar News