ಕಾಸರಗೋಡು | ಮೋಟಾರ್ ಪಂಪ್ ಆಫ್ ಮಾಡುವಾಗ ವಿದ್ಯುತ್ ಸ್ಪರ್ಶ: ವಿದ್ಯಾರ್ಥಿ ಮೃತ್ಯು

Update: 2022-11-29 06:40 GMT

ಕಾಸರಗೋಡು: ಮೋಟಾರ್ ಪಂಪ್ ನಿಂದ ವಿದ್ಯುತ್ ತಗಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಪೆರ್ಲ ಸಮೀಪದ ಸಾಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಕಾಟುಕುಕ್ಕೆ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ವನ್ ವಿದ್ಯಾರ್ಥಿ ಜಿತೇಶ್ (17) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸಾಯ ಗುಳಿಗೆಮೊಲೆಯಲ್ಲಿರುವ ಮನೆ ಸಮೀಪ ಪಂಪ್ ಶೆಡ್ ನಲ್ಲಿ ಘಟನೆ ನಡೆದಿದೆ.

ಮೋಟಾರ್ ಪಂಪ್ ಆಫ್ ಮಾಡಲು ತೆರಳಿದ್ದ ಸಂದರ್ಭದಲ್ಲಿ  ವಿದ್ಯುತ್ ಶಾಕ್ ತಗಲಿದೆ. ಮನೆಯವರು ಹಾಗೂ ಸ್ಥಳೀಯರು ವಿಟ್ಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Similar News