ಇಸ್ರೇಲ್ ಸೇನೆಯ ಗುಂಡಿನ ದಾಳಿ: 3 ಪೆಲೆಸ್ತೀನೀಯರ ಮೃತ್ಯು‌

Update: 2022-11-29 17:02 GMT

ಜೆರುಸಲೇಂ, ನ.29: ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಪೆಲೆಸ್ತೀನ್ನ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ.

ರಮಲ್ಲಾದ ಕಫ್ರೀನ್ ನಗರದ ಬಳಿ ಇಸ್ರೇಲ್ ಸೇನೆಯ ಗುಂಡೇಟಿಗೆ ಜಾವೆದ್ ಅಬ್ದುಲ್ರಹ್ಮಾನ್ ರಿಮಾವಿ (22 ವರ್ಷ) ಹಾಗೂ ದಫರ್ ಅಬ್ದುಲ್ರಹ್ಮಾನ್ ರಿಮಾವಿ (21 ವರ್ಷ) ಎಂಬ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ಹೆಬ್ರಾನ್ ನಗರದ ಬಳಿಯ ಬೆಯತ್ ಉಮ್ಮರ್ ಪ್ರದೇಶದಲ್ಲಿ ಇಸ್ರೇಲ್ ಸೇನೆಯ ಗುಂಡೇಟಿನಿಂದ ತಲೆಗೆ ಗಾಯವಾಗಿದ್ದ ವ್ಯಕ್ತಿ ಬಳಿಕ ಮೃತಪಟ್ಟಿದ್ದಾನೆ ಎಂದು ಪೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ . ಗಸ್ತು ತಿರುಗುತ್ತಿದ್ದ ಸೇನೆಯತ್ತ ಕಲ್ಲು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ಎಸೆದ ಗಲಭೆಕೋರರತ್ತ ಗುಂಡು ಹಾರಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.ಇಬ್ಬರು ಸಹೋದರರ ಹತ್ಯೆ ‘ಉದ್ದೇಶಪೂರ್ವಕ ಮತ್ತು ಕ್ರೂರ ಕೊಲೆ’ಯಾಗಿದೆ ಎಂದು ಪೆಲೆಸ್ತೀನ್ ಅಥಾರಿಟಿಯ ನಾಗರಿಕ ವಾಯುಯಾನ ಸಚಿವ ಹುಸೇನ್ ಅಲ್ಶೇಖ್ ಪ್ರತಿಕ್ರಿಯಿಸಿದ್ದಾರೆ.

Similar News