ಹಡಗಿನ ಚುಕ್ಕಾಣಿಯಲ್ಲಿ ಕುಳಿತು ಸಾಗುತ್ತಿದ್ದ ವಲಸಿಗರ ರಕ್ಷಣೆ

Update: 2022-11-29 18:18 GMT

ಮ್ಯಾಡ್ರಿಡ್, ನ.29: ನೈಜೀರಿಯಾದಿಂದ ಯುರೋಪ್‌ನತ್ತ ಸಂಚರಿಸುತ್ತಿದ್ದ ಹಡಗಿನ ಇಕ್ಕಟ್ಟಾದ ಚುಕ್ಕಾಣಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮೂವರು ವಲಸಿಗರನ್ನು ಸ್ಪೇನ್‌ನ ಕರಾವಳಿ ಕಾವಲು ಪಡೆ ರಕ್ಷಿಸಿದೆ. ಇವರು 11 ದಿನ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನೈಜೀರಿಯಾದ ಲಾಗೋಸ್‌ನಿಂದ ಯುರೋಪ್‌ನತ್ತ ತೆರಳುತ್ತಿದ್ದ ‘ಅಲ್ಥಿನಿ’ ಎಂಬ ಹಡಗಿನ ಕೆಳಭಾಗದ ಚುಕ್ಕಾಣಿಯಲ್ಲಿ ಈ ಮೂವರು ವಲಸಿಗರು ಕುಳಿತಿದ್ದರು. ಈ ಇಕ್ಕಟ್ಟಾದ ಜಾಗದಲ್ಲಿ ಅವರ ಕಾಲುಗಳು ಸಾಗರದ ನೀರಿನಿಂದ ಕೆಲವು ಅಡಿಗಳಷ್ಟೇ ಎತ್ತರದಲ್ಲಿದ್ದವು. ಹಡಗು ಸ್ಪೇನ್‌ನ ಕ್ಯಾನರಿ ದ್ವೀಪ ತಲುಪಿದಾಗ ಕರಾವಳಿ ಕಾವಲು ಪಡೆ ಹಡಗಿನ ಅಡಿಭಾಗದಲ್ಲಿದ್ದ ವಲಸಿಗರನ್ನು ಗಮನಿಸಿ ಅವರನ್ನು ರಕ್ಷಿಸಿದೆ. ಮೂವರೂ ನಿರ್ಜಲೀಕರಣ ಹಾಗೂ ಲಘೂಷ್ಣತೆ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ‘ದಿ ಗಾರ್ಡಿಯನ್’ ವರದಿ ಮಾಡಿದೆ.

Similar News